ಬಳ್ಳಾರಿ: ನಗರದ ದೊಡ್ಡ ಮಾರುಕಟ್ಟೆಯಿಂದ ತಾತ್ಕಾಲಿಕವಾಗಿ ಮುನ್ಸಿಪಲ್ ಕಾಲೇಜು ಆವರಣದಲ್ಲಿ ತರಕಾರಿ ಮಾರುಕಟ್ಟೆಯನ್ನು ಆರಂಭಿಸಲಾಗುವುದು. ಕೊರೊನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಈ ವರ್ಗಾವಣೆ ಮಾಡಲಾಗಿದೆ ಎಂದು ಪರಿಸರ ಅಭಿಯಂತರರಾದ ಹರ್ಷವರ್ಧನ ಹೇಳಿದರು.
ಗಮನಿಸಿ: ನಾಳೆಯಿಂದ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಆರಂಭ
ಬಳ್ಳಾರಿಯ ದೊಡ್ಡ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಮುನ್ಸಿಪಲ್ ಆವರಣದಲ್ಲಿ ನಾಳೆಯಿಂದ ಪ್ರಾರಂಭಿಸಲಾಗುವುದು ಎಂದು ಪರಿಸರ ಎಂಜಿನಿಯರ್ ಹರ್ಷವರ್ಧನ ತಿಳಿಸಿದ್ದಾರೆ.
ನಾಳೆಯಿಂದ ತಾತ್ಕಾಲಿಕ ತರಕಾರಿ ಮಾರುಕಟ್ಟೆ ಆರಂಭ
ಸುಮಾರು 120ರಿಂದ 150 ತರಕಾರಿ ಮಳಿಗೆಗಳನ್ನು ನಿರ್ಮಾಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಮಹಾನಗರ ಪಾಲಿಕೆ ಕಾರ್ಮಿಕರು ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಅಂಗಡಿ ಸ್ಥಳಗಳನ್ನು ಗುರುತಿಸಿ, ಚಿಹ್ನೆ ನೀಡಲಾಗಿದೆ. ತರಕಾರಿ ಅಂಗಡಿಯ ಪಕ್ಕ ಮತ್ತು ಮುಂಭಾಗದಲ್ಲಿ 3 ಅಡಿ ಅಂತರ ನಿಗದಿ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಪರಿಸರ ಅಭಿಯಂತರ ಹರ್ಷವರ್ಧನ ತಿಳಿಸಿದರು.