ಬಳ್ಳಾರಿ :ಒಂಬತ್ತು ತಿಂಗಳುಗಳ ಬಳಿಕ ಶಾಲಾ-ಕಾಲೇಜುಗಳ ತರಗತಿಗಳು ಪ್ರಾರಂಭವಾದ ಹಿನ್ನೆಲೆ ನಗರದ ಸರ್ಕಾರಿ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ವಾದ್ಯ ಮೇಳದೊಂದಿಗೆ ಆತ್ಮೀಯವಾಗಿ ಸ್ವಾಗತ ಕೋರಿತು.
ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಬ್ಯಾಂಡು ಬಜಾನದ ಸದ್ದು ಜೋರಾಗಿತ್ತು. ಕಳೆದ ಹಲವಾರು ತಿಂಗಳಿನಿಂದ ಗೃಹ ವಾಸದಲ್ಲಿದ್ದ ವಿದ್ಯಾರ್ಥಿಗಳು, ಇದೀಗ ಶಾಲೆಯತ್ತ ಮುಖ ಮಾಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಕೆ ಜಿ ಆಂಜನೇಯಲು, ತಮ್ಮ ವಿದ್ಯಾರ್ಥಿಗಳ ಆಗಮನಕ್ಕೆ ಸ್ವಾಗತ ಕೋರುವ ಸಲುವಾಗಿ ಬ್ಯಾಂಡ್ ಬಾರಿಸುವವರನ್ನು ನಿಯೋಜಿಸಿದ್ದರು.