ಬಳ್ಳಾರಿ:ಪಕ್ಕೆಲುಬು ಪದ ಉಚ್ಚರಿಸುವಂತೆ ಬಾಲಕನಿಗೆ ಬಲವಂತ ಮಾಡುತ್ತಿದ್ದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಸಹ ಶಿಕ್ಷಕನನ್ನು ಅಮಾನತುಗೊಳಿಸಿ ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಟಿ. ಚಂದ್ರಶೇಖರಪ್ಪ ಅವರು ಅಮಾನತುಗೊಂಡ ಶಿಕ್ಷಕರಾಗಿದ್ದು, ಪಕ್ಕೆಲುಬು ಎಂಬ ಪದ ಉಚ್ಛಾರಣೆಯನ್ನು ತಮ್ಮ ಶಾಲೆಯ ವಿದ್ಯಾರ್ಥಿಯೋರ್ವನಿಗೆ ಹೇಳಿಕೊಟ್ಟಿದ್ದಾರೆ. ಆ ವಿದ್ಯಾರ್ಥಿಯು ಪಕ್ಕೆಲುಬು ಪದ ಉಚ್ಛಾರಣೆ ಸರಿಯಾಗಿ ಮಾಡದೇ ಹೋದಾಗ, ಸಹಶಿಕ್ಷಕ ಚಂದ್ರಶೇಖರಪ್ಪ ಆ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.