ಕರ್ನಾಟಕ

karnataka

ETV Bharat / state

ಕ್ರೂರಿ ಕೊರೊನಾಗೆ ವಿಜಯನಗರ ಜಿಲ್ಲೆಯಲ್ಲಿ ಶಿಕ್ಷಕಿ ಬಲಿ - ಕೊರೊನಾಗೆ ಬಲಿಯಾದ ಶಿಕ್ಷಕಿ

ಮಹಾಮಾರಿ ಕೊರೊನಾಗೆ ಶಾಲಾ ಶಿಕ್ಷಕಿವೋರ್ವರು ಬಲಿಯಾಗಿದ್ದಾರೆ. ಮಂಜುಳಾ ಹವಾಲ್ದಾರ್(55) ಕೋವಿಡ್​ನಿಂದ ಸಾವನನ್ನಪ್ಪಿರುವ ಶಿಕ್ಷಕಿ. ಕಿತ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಇವರು ಕೆಲಸ ನಿರ್ವಹಿಸುತ್ತಿದ್ದರು.

ಶಿಕ್ಷಕಿ
ಶಿಕ್ಷಕಿ

By

Published : May 6, 2021, 4:10 PM IST

ಹೊಸಪೇಟೆ (ವಿಜಯನಗರ): ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಶಾಲಾ ಶಿಕ್ಷಕಿಯೊಬ್ಬರು ಇಂದು ಕೊರೊನಾಗೆ ಬಲಿಯಾಗಿದ್ದಾರೆ.

ಶಿಕ್ಷಕಿ ಮಂಜುಳಾ ಹವಾಲ್ದಾರ್(55) ಕರೊನಾಗೆ ಬಲಿಯಾದವರು. ಹಗರಿಬೊಮ್ಮನ ಹಳ್ಳಿ ತಾಲೂಕಿನ ಕಿತ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.

ಕೊರೊನಾಗೆ ಬಲಿಯಾದ ಶಿಕ್ಷಕಿ ಮಂಜುಳಾ

ಕಳೆದ ಮೂರ್ನಾಲ್ಕು ದಿನಗಳಿಂದ ಮಂಜುಳಾ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ABOUT THE AUTHOR

...view details