ಬಳ್ಳಾರಿ: ಕರ್ನಾಟಕ ಮತ್ತು ಆಂಧ್ರ ಗಡಿಸರ್ವೇ ಕಾರ್ಯವು ಈಗಲಾದರೂ ಸರಿಯಾಗಿ ನಡೆಯಲಿ ಎಂದು ಗಣಿ ಅಕ್ರಮ ವಿರುದ್ಧದ ಹೋರಾಟಗಾರ ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ.
ಕರ್ನಾಟಕ, ಆಂಧ್ರ ಗಡಿ ಸರ್ವೇ ಈಗಲಾದ್ರೂ ಸರಿಯಾಗಿ ನಡೆಯಲಿ: ಟಪಾಲ್ ಗಣೇಶ್ - Karnataka, Andhra Pradesh Survey
ಕರ್ನಾಟಕ ಮತ್ತು ಆಂಧ್ರ ಗಡಿಸರ್ವೇ ಮಾಡಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಈ ಹಿಂದೆ ಜಿಲ್ಲೆಗೆ ಬಂದಿದ್ದ ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ಗಳ ನೇತೃತ್ವದ ತಂಡ 43 ದಿನ ಮಾಡಿರುವ ಗಡಿ ಸರ್ವೇ ಅವೈಜ್ಞಾನಿಕವಾಗಿದೆ. 1896ರ ನಕ್ಷೆಯನ್ನು ಸರ್ವೇಕಾರ್ಯಕ್ಕೆ ಬಳಕೆ ಮಾಡಲು ಆಗುವುದಿಲ್ಲ ಎಂದು ಸರ್ವೇ ಆಫ್ ಇಂಡಿಯಾದ ಹಿಂದಿನ ಡೈರೆಕ್ಟರ್ಗಳು ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದಾರೆ. ನಂತರ ಅದೇ ನಕ್ಷೆ ಬಳಸಿ ಸರ್ವೇ ಮಾಡಿರುವುದು ಬೆಳಕಿಗೆ ಬಂದಿದೆ.
ಈಗಲಾದ್ರೂ ಬ್ರಿಟಿಷರ ಕಾಲದ 1886-87 ನಕ್ಷೆಯ ಪ್ರಕಾರ ಸರ್ವೇ ನಡೆಯಬೇಕು. ಎರಡು ಗ್ರಾಮಗಳ ನಡುವಿನ ಸರಹದ್ದು ಹಾಗೂ ಮೂರು ಗ್ರಾಮಗಳ ನಡುವಿನ ಸರಹದ್ದನ್ನು ಮೊದಲು ಗುರುತಿಸಿ ನಂತರ ಈ ಸರ್ವೇ ಕಾರ್ಯಕ್ಕೆ ಸರ್ವೇ ಆಫ್ ಇಂಡಿಯಾದ ಅಧಿಕಾರಿ ವರ್ಗ ಮುಂದಾಗಬೇಕೆಂದರು.