ಕರ್ನಾಟಕ

karnataka

ETV Bharat / state

ಸಾಮಾಜಿಕ ಕಾರ್ಯಕರ್ತರಿಗೆ ಬ್ಲ್ಯಾಕ್ ಮೇಲ್ ಫ್ಯಾಷನ್ ಆಗಿದೆ: ಟಪಾಲ್ ಗಣೇಶ ಕಿಡಿ - ಟಪಾಲ್ ಗಣೇಶ ಆಕ್ರೋಶ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬಳಿಕ ಕೆಲವರು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ‌. ಅದು ಅವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ಟಪಾಲ್ ಗಣೇಶ ವಾಗ್ದಾಳಿ‌ ನಡೆಸಿದ್ದಾರೆ.

Tapal Ganesh press meet in Bellary
ಟಪಾಲ್ ಗಣೇಶ ಆಕ್ರೋಶ

By

Published : Mar 9, 2021, 1:13 PM IST

Updated : Mar 9, 2021, 2:27 PM IST

ಬಳ್ಳಾರಿ:ಸಾಮಾಜಿಕ ಕಾರ್ಯಕರ್ತರಿಗೆ ಬ್ಲ್ಯಾಕ್ ಮೇಲ್ ಮಾಡೋದು ಫ್ಯಾಷನ್ ಆಗಿಬಿಟ್ಟಿದೆ ಎಂದು ಹೋರಾಟಗಾರ ಟಪಾಲ್ ಗಣೇಶ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಟಪಾಲ್ ಗಣೇಶ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾದ ಬಳಿಕ ಕೆಲವರು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ‌. ಅದು ಅವರಿಗೆ ಫ್ಯಾಷನ್ ಆಗಿಬಿಟ್ಟಿದೆ ಎಂದು ವಾಗ್ದಾಳಿ‌ ನಡೆಸಿದ್ದಾರೆ.

ಟಪಾಲ್ ಗಣೇಶ ಆಕ್ರೋಶ

19 ರಾಸಲೀಲೆ ಸಿಡಿಗಳಿವೆ. ಅವುಗಳನ್ನ ಒಂದು ಗ್ಯಾಂಗೇ ರೆಕಾರ್ಡ್ ಮಾಡಿಟ್ಟುಕೊಂಡಿದೆ ಎಂತಲೂ ಅವರು ಹೇಳಿಕೆ ನೀಡಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ಬ್ಲ್ಯಾಕ್ ಮೇಲ್ ತಂತ್ರಗಾರಿಕೆ ಎಂದು ಪಕ್ಕಾ ತಿಳಿದು ಬರುತ್ತೆ ಎಂದರು.

ಓದಿ : 4 ತಿಂಗಳ ಮೊದಲೇ ಸಿಡಿ ಬಗ್ಗೆ ಗೊತ್ತಿತ್ತು, ಮಹಾನ್ ನಾಯಕನಿಂದ ಇದೆಲ್ಲಾ ನಡೆದಿದೆ: ರಮೇಶ್ ಜಾರಕಿಹೊಳಿ - VIDEO

ದಾಖಲೆ ಅಥವಾ ಸಾಕ್ಷಿಗಳನ್ನ ಇಟ್ಟುಕೊಂಡು ನ್ಯಾಯಯುತ ಹೋರಾಟ ಮಾಡಿ, ಬೇಡ ಎನ್ನುವುದಲ್ಲ. ಆದರೆ, ಅದನ್ನೇ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡೋದಾಗಲಿ ಅಥವಾ ಡೀಲಿಂಗ್ ಮಾಡೋದಾಗಲಿ ಯಾರೊಬ್ಬರೂ ಮಾಡಬಾರದು.‌ ಅದು ಅತ್ಯಂತ ಹೀನಾಯ ಕೃತ್ಯವೆಂದು ಟಪಾಲ್ ಗಣೇಶ ಆರೋಪಿಸಿದ್ದಾರೆ.

Last Updated : Mar 9, 2021, 2:27 PM IST

ABOUT THE AUTHOR

...view details