ಕರ್ನಾಟಕ

karnataka

ETV Bharat / state

ತಾಕತ್ತಿದ್ದರೆ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಕೊಡಿ: ಟಪಾಲ್ ಗಣೇಶ್​ ಸವಾಲು - MLA Somashekara Reddy

ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಕೋಡೋದಾಗಿ ಬರೀ ಹೇಳಿಕೆ ಕೋಡೋದಲ್ಲ. ನಿಮಗೇನಾದ್ರೂ ತಾಕತ್ತಿದ್ದರೆ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗಡೆ ಬನ್ನಿ‌ ನೋಡೋಣ. ಆಗ ನೀವೇನಾದ್ರೂ ಪುನರ್ ಅಯ್ಕೆ ಬಯಸಿದ್ರೆ ಮೊದಲನೇಯವನಾಗಿ‌ ನಾನೇ ನಿಮಗೆ ಮತ ಹಾಕುವೆ ಎಂದು ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಟಪಾಲ್ ಗಣೇಶ್​ ಸವಾಲು ಹಾಕಿದ್ದಾರೆ.

tapal ganesh
ಟಪಾಲ್ ಗಣೇಶ್

By

Published : Dec 3, 2020, 2:38 PM IST

ಬಳ್ಳಾರಿ: ನೂತನ ವಿಜಯನಗರ ಜಿಲ್ಲೆ ಘೋಷಣೆ ನಿಮಿತ್ತ ನನ್ನ ಕ್ಷೇತ್ರದ ಜನ ಇಷ್ಟಪಟ್ರೆ ರಾಜೀನಾಮೆ ಕೊಟ್ಟು ಹೊರಬರೋದಾಗಿ ಹೇಳಿದ ಶಾಸಕ ಗಾಲಿ ಸೋಮಶೇಖರ ರೆಡ್ಡಿಗೆ ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್​ ಅವರು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬರಲಿ ಎಂದು ಸವಾಲೆಸೆದಿದ್ದಾರೆ.

ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್​

ಬಳ್ಳಾರಿಯ ಗಣೇಶ ಕಾಲೊನಿಯ ತಮ್ಮ ನಿವಾಸದಲ್ಲಿಂದು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಕೋಡೋದಾಗಿ ಬರೀ ಹೇಳಿಕೆ ಕೋಡೋದಲ್ಲ. ನಿಮಗೇನಾದ್ರೂ ತಾಕತ್ತಿದ್ದರೆ ಮೊದಲು ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗಡೆ ಬನ್ನಿ‌ ನೋಡೋಣ. ಆಗ ನೀವೇನಾದ್ರೂ ಪುನರ್ ಅಯ್ಕೆ ಬಯಸಿದ್ರೆ ಮೊದಲನೇಯವನಾಗಿ‌ ನಾನೇ ನಿಮಗೆ ಮತ ಹಾಕುವೆ ಎಂದರು.

ಕೇವಲ ಬೂಟಾಟಿಕೆ ಹೇಳಿಕೆ ನೀಡೋದು ಬೇಡ.‌ ಇಂತಹ ಹೇಳಿಕೆಯನ್ನು ಯಾರೂ ಕೂಡ ಒಪ್ಪಲ್ಲ. ನಾನು ವ್ಯಾವಹಾರಿಕವಾಗಿ ಬದ್ಧ ವೈರಿಯಾದ್ರೂ ಕೂಡ ವಿಜಯನಗರ ಜಿಲ್ಲೆ ರಚನೆಯನ್ನು ವಿರೋಧಿಸಿ ಹೊರಗಡೆ ಬಂದ ನಿಮಗೆ ನನ್ನ‌ ಮತಹಾಕುವೆ ಎಂದು ಹೇಳಿದರು.

ಇದಲ್ಲದೇ, ಸಚಿವ ಶ್ರೀರಾಮುಲು ಕೂಡ ವಿಜಯನಗರ ಜಿಲ್ಲೆ ಘೋಷಣೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ನಿಮಗೇನಾದ್ರೂ ಈ‌ ಜಿಲ್ಲೆಯ ಬಗ್ಗೆ ಪ್ರೀತಿ- ವಿಶೇಷ ಕಾಳಜಿ‌ ಇದ್ದರೆ ಅಖಂಡ ಬಳ್ಳಾರಿ ಜಿಲ್ಲೆಯ ಉಳಿವಿಗಾಗಿ ಹೋರಾಟ ನಡೆಸಿ. ಅದು ಬಿಟ್ಟು ಮೀಸಲಾತಿ ಆಧಾರದ ಅಡಿಯಲ್ಲಿ ಲಾಭ ಪಡೆಯಲು ನೀವು ಹೋಗಬೇಡಿ.‌ ಮುಂದಿನ ದಿನಗಳಲ್ಲಿ ಜಿಲ್ಲೆಯ ಮತದಾರರು ತಕ್ಕಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details