ಹೊಸಪೇಟೆ (ವಿಜಯನಗರ):ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮವನ್ನು ಮೇ 15 ರಿಂದ ಏಳು ದಿನಗಳ ಕಾಲ ಸೀಲ್‌ಡೌನ್ ಮಾಡಿ ತಹಶೀಲ್ದಾರ್ ಶರಣಮ್ಮ ಅವರು ಆದೇಶ ಹೊರಡಿಸಿದ್ದಾರೆ.
ಕೊರೊನಾಗೆ ತಡೆಯೊಡ್ಡಲು ತಂಬ್ರಹಳ್ಳಿ ಏಳು ದಿನ ಸೀಲ್‌ಡೌನ್ - ತಂಬ್ರಹಳ್ಳಿ ಗ್ರಾಮವನ್ನು ಮೇ.15 ರಿಂದ ಏಳು ದಿನಗಳ ಕಾಲ ಸೀಲ್‌ಡೌನ್ ಮಾಡಿ ತಹಶೀಲ್ದಾರ್ ಆದೇಶ
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮ ಸಂಪೂರ್ಣ ಸೀಲ್‌ಡೌನ್ ಮಾಡಿ ತಹಶೀಲ್ದಾರ್ ಆದೇಶವನ್ನು ಹೊರಡಿಸಿದ್ದಾರೆ.
ಈವರೆಗೆ ತಂಬ್ರಹಳ್ಳಿಯಲ್ಲಿ 61 ಕ್ಕೂ ಅಧಿಕ ಪಾಸಿಟಿವ್ ಕೇಸ್ ಪತ್ತೆಯಾಗಿವೆ. 5 ಕೊರೊನಾ ರೋಗಿಗಳು ಹಾಗೂ 4 ಕ್ಕೂ ಅಧಿಕ ಕೋವಿಡೇತರ ರೋಗಿಗಳು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಕಲಿ ಡಾಕ್ಟರ್‌ಗಳು ಕೋವಿಡ್ ರೋಗ ಲಕ್ಷಣಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಇದರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ. ಔಷಧಿ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ನಿಷೇಧಿಲಾಗಿದೆ. ಒಂದು ವೇಳೆ ಕಾನೂನುನನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಖಾಸಗಿ ಸಹಭಾಗಿತ್ವದಲ್ಲಿ ಎಲ್ಲಾ ಜಿಲ್ಲೆಗಳಿಗೂ ಆಕ್ಸಿಜನ್ ಬಸ್ ಒದಗಿಸಲು ಸಿದ್ಧ: ಡಿಸಿಎಂ ಸವದಿ