ಕರ್ನಾಟಕ

karnataka

ETV Bharat / state

ತಹಶೀಲ್ದಾರ್ ವಿರುದ್ಧ ಲಂಚದ ಆರೋಪ : ಅಮಾನತಿಗೆ ಆಗ್ರಹಿಸಿದ ರಾಷ್ಟ್ರ ಸಮಿತಿ ಅಧ್ಯಕ್ಷ

ಮರಳು ಸಾಗಾಣಿಕೆಗೆ ವಾರಕ್ಕೆ 10 ಸಾವಿರ ರೂ. ಅಥವಾ ತಿಂಗಳಿಗೆ ₹40 ಸಾವಿರ ಲಂಚ ನೀಡಿದ್ರೇ ಮಾತ್ರ ಅವಕಾಶ ನೀಡುತ್ತಾರೆ. ಹೀಗೆ ಅವರ ಸಹಾಯಕರಿಂದ ಹಣ ಪಡೆಯುತ್ತಿರುವ ವಿಡಿಯೋ ಕೂಡ ಸಿಕ್ಕಿದೆ..

Tahashildar Accused of bribery in bellary
ರಾಷ್ಟ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ

By

Published : Sep 5, 2020, 10:09 PM IST

ಬಳ್ಳಾರಿ :ಹೂವಿನ ಹಡಗಲಿ ತಹಶೀಲ್ದಾರ್​ ಭ್ರಷ್ಟ ಹಾಗೂ ಮಾನಸಿಕ ಅಸ್ವಸ್ಥರಾಗಿದ್ದಾರೆ. ಮರಳು ಸಾಗಾಣಿಕೆಗೆ ಲಂಚ ನೀಡಬೇಕು ಎಂದು ರಾಷ್ಟ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಆರೋಪಿಸಿದರು.

ರಾಷ್ಟ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್

ತಾಲೂಕು ದಂಡಾಧಿಕಾರಿ ವಿಜಯ ಕುಮಾರ್ ಭ್ರಷ್ಟತೆಯಲ್ಲಿ ಪಾಲ್ಗೊಂಡಿದ್ದಾರೆ. ತಾಲೂಕಿನ ಹಲವು ಜನರ ಮೇಲೆ ದೌರ್ಜನ್ಯ ಕೂಡ ಎಸಗಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮೂಲಕ ಕಂದಾಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಮರಳು ಸಾಗಾಣಿಕೆಗೆ ವಾರಕ್ಕೆ 10 ಸಾವಿರ ರೂ. ಅಥವಾ ತಿಂಗಳಿಗೆ ₹40 ಸಾವಿರ ಲಂಚ ನೀಡಿದ್ರೇ ಮಾತ್ರ ಅವಕಾಶ ನೀಡುತ್ತಾರೆ. ಹೀಗೆ ಅವರ ಸಹಾಯಕರಿಂದ ಹಣ ಪಡೆಯುತ್ತಿರುವ ವಿಡಿಯೋ ಕೂಡ ಸಿಕ್ಕಿದೆ. ಅವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು ಎಂದು ಕಂದಾಯ ಸಚಿವರಿಗೆ ಮನವಿ ಮೂಲಕ ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ ಯ ಗಣೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿ.ಸುನೀತಾ, ಉಪಾಧ್ಯಕ್ಷ‌ ಶ್ರೀನಿವಾಸ್ ರೆಡ್ಡಿ ಇದ್ದರು.

ABOUT THE AUTHOR

...view details