ಬಳ್ಳಾರಿ:ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿಸ್ವಚ್ಛಮೇವ ಜಯತೆ ಆಂದೋಲನದ ಅಂಗವಾಗಿ ಸ್ವಚ್ಚತೆ ಜನ ಸಂರಕ್ಷಣೆ, ಪರಿಸರ ಸಂರಕ್ಷಣಾ ಜನಜಾಗೃತಿ ಸಲುವಾಗಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅದರಲ್ಲಿ ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳಾದ ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ ಪ್ರಥಮ ಸ್ಥಾನ ಗಳಿಸಿದ್ದು,10, 000. ಸಾವಿರ ನಗದನ್ನು ಬಹುಮಾನವಾಗಿ ಪಡೆದರು.
ಜಿಲ್ಲಾ ಮಟ್ಟದ ರಸಪ್ರಶ್ನೆ ಕಾರ್ಯಕ್ರಮ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಂಟು ತಾಲೂಕಿನ 500 ವಿದ್ಯಾರ್ಥಿಗಳು ಭಾಗವಹಿಸಿ, ಅಂತಿಮ ಸುತ್ತಿಗೆ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಅಂತಿಮ ರಸಪ್ರಶ್ನೆಯಲ್ಲಿ ಐದು ಸುತ್ತುಗಳು ನಡೆಯಿತು. ಅದರಲ್ಲಿ ಬಳ್ಳಾರಿ ಸರ್ಕಾರಿ ಆದರ್ಶ ವಿದ್ಯಾಲಯ ಶಾಲೆಯ ವಿದ್ಯಾರ್ಥಿಗಳು 105 ಅಂಕ ಪಡೆದು ಜೆ.ಎಂ ಸುಷ್ಮಾ ಮತ್ತು ಎಂ.ಜ್ಞಾನ ರಚನಾ ಕುಮಾರ್ ಪ್ರಥಮ ಬಹುಮಾನ ಪಡೆದರು.
ಈ ಕಾರ್ಯಕ್ರಮದಲ್ಲಿ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ್ ಜನಾಕಿರಾಮ್, ಡಿಡಿಪಿಐ ಶ್ರೀಧರನ್ , ಡಿಡಿಪಿಯು ನಾಗರಾಜ್ ಮತ್ತು ನೂರಾರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದರು.