ಕರ್ನಾಟಕ

karnataka

ETV Bharat / state

ಹೊಸಪೇಟೆ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವವಾಗಿ ಕಾಲುವೆಯಲ್ಲಿ ಪತ್ತೆ! - ಎಸ್​​ಎಸ್​ಎಸ್​​ಸಿ ವಿದ್ಯಾರ್ಥಿ ಸುನೀಲ್ ನಾಯ್ಕ

ಕಳೆದ ಮೂರು ದಿನಗಳ ಹಿಂದಷ್ಟೇ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ, ವಿದ್ಯಾರ್ಥಿಯೊರ್ವನು ಶವವಾಗಿ ಪತ್ತೆಯಾಗಿದ್ದಾನೆ.

student found as dead
ವಿದ್ಯಾರ್ಥಿ ಶವವಾಗಿ ಪತ್ತೆ

By

Published : Nov 26, 2019, 9:50 AM IST

ಬಳ್ಳಾರಿ:ಜಿಲ್ಲೆಯ ಹೊಸಪೇಟೆಯ ಎಂ.ಪಿ. ಪ್ರಕಾಶ ನಗರದಲ್ಲಿ ಕಳೆದ ಮೂರು ದಿನಗಳ ಹಿಂದಷ್ಟೇ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ, ವಿದ್ಯಾರ್ಥಿ ಶವವಾಗಿ ಪತ್ತೆ ಯಾಗಿದ್ದಾನೆ.

ಹೊಸಪೇಟೆ ನಗರದ ಚೈತನ್ಯ ಟೆಕ್ನೋ ಶಾಲೆಯ ಎಸ್​​ಎಸ್​ಎಸ್​​ಸಿ ವಿದ್ಯಾರ್ಥಿ ಸುನೀಲ್ ನಾಯ್ಕ (16) ಎಂದು ಗುರುತಿಸಲಾಗಿದೆ. ಹೊಸಪೇಟೆ ಎಂ.ಜಿ.ನಗರದ ನಿವಾಸಿ ಸುನೀಲ್​​​ಟ್ಯೂಷನ್​​ನಿಂದ ಮನೆಗೆ ವಾಪಾಸ್ ಮರುಳುವಾಗ ಈ ಘಟನೆ ನಡೆದಿದೆ ಎನ್ನಲಾಗ್ತಿದೆ.

ವಿದ್ಯಾರ್ಥಿ ಶವವಾಗಿ ಪತ್ತೆ

ನಿನ್ನೆ ವಿದ್ಯಾರ್ಥಿ ಮೃತದೇಹವು ಬಳ್ಳಾರಿ ನಗರ ಹೊರವಲಯದ ಅಲ್ಲೀಪುರ ಉಪಕಾಲುವೆಯಲ್ಲಿ ದೊರೆತಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದು, ಮೃತದೇಹದ ವೈದ್ಯಕೀಯ ತಪಾಸಣೆ ನಡೆಸಿ ವಿದ್ಯಾರ್ಥಿಯ ಪೋಷಕರಿಗೆ ಮೃತದೇಹವನ್ನು ಪೊಲೀಸರು ಹಸ್ತಾಂತರಿಸಿದ್ದಾರೆ. ಈ ಕುರಿತು ಹೊಸಪೇಟೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details