ಕರ್ನಾಟಕ

karnataka

ETV Bharat / state

ಗಣಿ ಅಕ್ರಮ ಬಯಲಾದ ನಂತರ ಬಳ್ಳಾರಿಗೆ ಬರೋದನ್ನೇ ನಿಲ್ಲಿಸಿದ್ದ ಸುಷ್ಮಾ!

ಬಳ್ಳಾರಿಯಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿದ ಸುಷ್ಮಾ ಸ್ವರಾಜ್ ಜಿಲ್ಲೆಯೊದಿಗೆ ಆಪ್ತ ಸಂಬಂಧವನ್ನು ಹೊಂದಿದ್ದು, ವರಮಾಹಲಕ್ಷ್ಮಿ‌ಪೂಜೆ ಸೇರಿದಂತೆ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ‌ಪಾಲ್ಗೊಳ್ಳುತ್ತಿದ್ದರು.

ರೆಡ್ಡಿ, ಶ್ರೀರಾಮುಲು ಜೊತೆ ಆಪ್ತ ನಂಟು ವರಮಾಹಲಕ್ಷ್ಮಿ‌ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸುಷ್ಮಾ ಸ್ವರಾಜ್

By

Published : Aug 7, 2019, 4:05 AM IST

Updated : Aug 7, 2019, 10:36 AM IST

ಬಳ್ಳಾರಿ: 1999 ರಲ್ಲಿ ಬಳ್ಳಾರಿಗೆ ಸೋನಿಯಾ ವಿರುದ್ದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸುಷ್ಮಾ ಸ್ವರಾಜ್ ಸೋತರು. ಆದರೂ ಜಿಲ್ಲೆಯ ನಂಟು ಬಿಡದೆ ರೆಡ್ಡಿ ಸಹೋದರರು ಮತ್ತು ಬಿ. ಶ್ರೀರಾಮುಲು ಅವರೊಂದಿಗೆ ಪ್ರತಿವರ್ಷ ವರಮಹಾಲಕ್ಷ್ಮೀ ಪೂಜೆಗೆ ಆಗಮಿಸುತ್ತಿದ್ದರು.

ವರಮಾಹಲಕ್ಷ್ಮಿ‌ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದ ಸುಷ್ಮಾ ಸ್ವರಾಜ್

ಕೇಂದ್ರದಲ್ಲಿ ವಾರ್ತಾ ಸಚಿವರಾಗಿ ಬಳ್ಳಾರಿ ಜಿಲ್ಲೆಗೆ ದೂರದರ್ಶನ ಮರು ಪ್ರಸಾರ ಕೇಂದ್ರ ಮತ್ತು ಬಳ್ಳಾರಿ ನಗರದಲ್ಲಿ ಎಫ್‍ಎಂ.ರೇಡಿಯೋ ಕೇಂದ್ರ ಆರಂಭಿಸಿದ್ದರು. ಆರೋಗ್ಯ ಸಚಿವರಾಗಿ ಬೃಹತ್ ಆರೋಗ್ಯ ಮೇಳವನ್ನು ನಡೆಸಿಕೊಟ್ಟಿದ್ದರು. 2010 ರವರೆಗೆ ಬಳ್ಳಾರಿಗೆ ಬಂದ ಅವರು ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆ ಆರೋಪ ಹೊತ್ತಮೇಲೆ ಬರುವುದನ್ನು ನಿಲ್ಲಿಸಿದರು. ನಂತರ ಅವರು ರೆಡ್ಡಿ ಸಹೋದರರ ಸಂಪರ್ಕದಿಂದ ದೂರ ಸರಿದರು.

ಆದರೆ ಅವರು ಬಳ್ಳಾರಿಯಲ್ಲಿ ಬಿಜೆಪಿ ಪಕ್ಷಕ್ಕೆ ಹಾಕಿದ ಬುನಾದಿಯೇ ಇಂದಿಗೂ ಸಹ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಗಟ್ಟಿಯಾದ ನೆಲೆಯೂರಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. 1999ರಲ್ಲಿ ಚುನಾವಣೆ ನಿಮಿತ್ತ ಸೋನಿಯಾ ವಿರುದ್ಧ ಸ್ಫರ್ಧೆ ಮಾಡಲು ಬಂದಿದ್ದರು. ಆಗ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಅವರ ಮನೆಯಲ್ಲಿ ವರಮಾಹಾಲಕ್ಷ್ಮಿ ಪೂಜೆ ಮಾಡಿದ್ದರು. ಅಂದು ಪ್ರತಿ ವರ್ಷ ಬರುವುದಾಗಿ ಹೇಳಿ ಹೋಗಿದ್ದರು.

ನಂತರದ ವರ್ಷದಿಂದ ಡಾಕ್ಟರ್ ಮನೆಯಲ್ಲಿ ವರಮಾಹಲಕ್ಷ್ಮಿ‌ಪೂಜೆ ನಂತರ ಜನಾರ್ಧನ ರೆಡ್ಡಿ ಮತ್ತು ಶ್ರೀರಾಮುಲು ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು‌ ‌ಪಾಲ್ಗೊಂಡಿದ್ದರು.

Last Updated : Aug 7, 2019, 10:36 AM IST

ABOUT THE AUTHOR

...view details