ಬಳ್ಳಾರಿ: ಸಾರ್ವಜನಿಕರ ಹಿತಾಸಕ್ತಿಗಾಗಿ ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದ್ದು, ಸಣ್ಣ ಪುಟ್ಟ ಸಮಸ್ಯೆಗಳಿರುವ ಹಿನ್ನೆಲೆ ಈವರೆಗೂ ಆ ಮಾರುಕಟ್ಟೆಯನ್ನು ಬಳಸಲು ಮುಂದಾಗಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಸಣ್ಣ ಪುಟ್ಟ ಸಮಸ್ಯೆಗಳಿಂದ ಭಾನುವಾರದ ಸಂತೆ ಮಾರುಕಟ್ಟೆ ಸ್ಥಗಿತ: ಡಿಸಿ - ಬಳ್ಳಾರಿ ನಗರದ ಡಾ.ರಾಜ್ ರಸ್ತೆ
ಬಳ್ಳಾರಿ ನಗರದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆ ನಿರ್ಮಾಣ ಮಾಡಲಾಗಿದ್ದು, ಕೆಲವು ಸಮಸ್ಯೆಗಳಿರುವ ಕಾರಣ ಮಾರುಕಟ್ಟೆಯನ್ನು ಬಳಕೆ ಮಾಡುತ್ತಿಲ್ಲವೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಳ್ಳಾರಿ ನಗರದ ಡಾ. ರಾಜ್ ರಸ್ತೆಯಲ್ಲಿರುವ ಬಿಡಿಎಎ ಫುಟ್ಬಾಲ್ ಮೈದಾನದಲ್ಲಿಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಆಯೋಜಿಸಿದ್ದ ಜಿಲ್ಲಾಧಿಕಾರಿ ಅವರೊಂದಿಗಿನ ಸಂವಾದ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯ ಸರ್ಕಾರ ಅಂದಾಜು ಮೂರು ಕೋಟಿ ರೂ. ವೆಚ್ಚದಲ್ಲಿ ಭಾನುವಾರದ ಸಂತೆ ಮಾರುಕಟ್ಟೆಗೆ ವ್ಯವಸ್ಥೆ ಮಾಡಿದೆ. ಬೀದಿ ಬದಿ ಹಾಗೂ ಬಡ ವ್ಯಾಪಾರಸ್ಥರ ನಡುವಿನ ಕಿತ್ತಾಟದಿಂದಾಗಿ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂದಿದ್ದಾರೆ.
ಈಗಾಗಲೇ ಎಪಿಎಂಸಿ ಮಾರುಕಟ್ಟೆ ಅಧಿಕಾರಿಗಳಿಗೆ ನೋಟಿಸ್ ನೀಡಿರುವೆ. ಸಣ್ಣ ಪುಟ್ಟ ಸಮಸ್ಯೆಗಳ ಕಾರಣಗಳ ನೆಪವೊಡ್ಡಿ ಈ ಸಂತೆ ಮಾರುಕಟ್ಟೆ ಬಳಕೆಯಾಗುತ್ತಿಲ್ಲ ಎಂಬ ಸಬೂಬು ನೀಡಿದ್ದಾರೆ. ಹೀಗಾಗಿ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದ್ರೆ, ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿದ್ರೆ ಕಷ್ಟವಾಗುತ್ತದೆ. ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಹಾಗೊಂದು ವೇಳೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿದರೆ ಜಿಲ್ಲಾಡಳಿತದ ಆದೇಶಕ್ಕೆ ತಾವೆಲ್ಲ ಬದ್ಧರಾಗಿರಬೇಕಾಗುತ್ತದೆ ಎಂದು ಕಟ್ಟಪ್ಪಣೆ ನೀಡಿದ್ದಾರೆ.