ಬಳ್ಳಾರಿ:ನಗರದ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ರೈಲ್ವೆ ಖಾಸಗೀಕರಣ ವಿರೋಧಿಸಿ ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.
ನಗರದಲ್ಲಿ ಮಾತನಾಡಿದ ಎಸ್.ಯು.ಸಿ.ಐ. ನ ಜಿಲ್ಲಾ ಸಮಿತಿಯ ಸದಸ್ಯರಾದ ಸೋಮಶೇಖರ್, ಬಿಜೆಪಿ ನೇತೃತ್ವದ ಮೋದಿ ಸರ್ಕಾರ 2014 ರಿಂದ ರೈಲ್ವೆ ವಲಯವನ್ನು ಹಂತ ಹಂತವಾಗಿ ಖಾಸಗೀಕರಣ ಮಾಡುತ್ತಿದೆ. ವಿವೇಕ್ ದೇವ್ ರಾಯ್ ಸಮಿತಿ ರಚಿಸಿ ರೈಲ್ಚೆಯನ್ನು ತುಂಡು ತುಂಡಾಗಿ ಸರ್ವನಾಶ ಮಾಡುವ ನೀಲಿ ನಕ್ಷೆಯನ್ನು ರೂಪಿಸಿದೆ ಎಂದು ಆರೋಪಿಸಿದರು.
ರೈಲ್ವೆಯ ನಿರ್ಮಾಣ ಕಾರ್ಯಾಚರಣೆ, ನಿರ್ವಹಣೆ, ರೈಲು ಕೋಚ್ , ಮೀಸಲು ಮಾರ್ಗ, ಟ್ರೇನ್ ಸೆಟ್ ಗಳು ಸೇರಿದಂತೆ ಭಾರತೀಯ ರೈಲ್ವೆ ನಿರ್ವಹಿಸುವ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿಭಜಸಿ ಖಾಸಗೀಕರಣಗೊಳಿಸಿ, ನೇರ ವಿದೇಶಿ ಬಂಡವಾಳ ಹೂಡಲ ಅನುಮತಿ ನೀಡಿತು ಎಂದರು.
ಬೇಡಿಕೆಗಳು :
1. 109 ರೂಟ್ ಗಳಲ್ಲಿ 151 ಖಾಸಗಿ ರೈಲುಗಳನ್ನು ಓಡಿಸುವ ಯೋಜನೆಯನ್ನು ಕೈ ಬಿಡಬೇಕು.
2. ರೈಲ್ವೆ ಜಮೀನು, ಕಾಲೋನಿ, ಆಸ್ಪತ್ರೆಗಳು, ವರ್ಕ್ ಶಾಪ್ ಮತ್ತು ಇತರೆ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಮಾರಾಟ ಮಾಡುವುದನ್ನು ತಡೆಗಟ್ಟಬೇಕು.