ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯ ಕುರುಗೋಡಿನ ರಾಘವಾಂಕ ಮಠಕ್ಕೆ ರಾತ್ರೋರಾತ್ರಿ ಉತ್ತರಾಧಿಕಾರಿ ನೇಮಕ ಮಾಡಿರೋದೆಲ್ಲಾ ಶುದ್ಧ ಸುಳ್ಳು ಎಂದು ರಾಘವಾಂಕ ಮಠದ ಹಾಲಿ ಸ್ವಾಮೀಜಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿಯವರು ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಹಾಲಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಅವರು, ನಿರ್ಗಮಿತ ರಾಘವಾಂಕ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ (ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ) ಅವರು ರಾತ್ರೋರಾತ್ರಿ ಹಾಲಿ ಪಟ್ಟಾಧಿಕಾರಿ ಇದ್ದಾಗಲೇ ಮತ್ತೋರ್ವ ಪಟ್ಟಾಧಿಕಾರಿ ನೇಮಕ ಮಾಡಿದ್ದಾರೆ ಎಂಬ ಆರೋಪ ಮಾಡಿರೋದೆಲ್ಲಾ ಸುಳ್ಳು. ಬ್ರಾಹ್ಮಿ ಮೂಹೂರ್ತದಲ್ಲಿ ಪಟ್ಟಾಧಿಕಾರಿ ನೇಮಕ ನಡೆದಿದೆ. ಅದು ಕೂಡ ಶ್ರೀಶೈಲ ಹಾಗೂ ಉಜ್ಜಯಿನಿ ಪೀಠದ ಜಗದ್ಗುರುಗಳ ಮಹಾಸನ್ನಿಧಿಯಲ್ಲೇ ನಡೆದಿದೆ ಎಂದು ಹಾಲಿ ಸೂಗೂರೇಶ್ವರ ರಾಘವಾಂಕ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.