ವಿಜಯನಗರ : ಹೊಸಪೇಟೆಯಲ್ಲಿ ಕಾಲುವೆಯಲ್ಲಿ ಈಜಾಡಲು ಹೋಗಿದ್ದ ವಿದ್ಯಾರ್ಥಿಗಳು ನೀರುಪಾಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಪತ್ತೆಯಾಗಿರುವ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ವಿಜಯನಗರ ಎಸ್‌ಪಿ ಶ್ರೀಹರಿಬಾಬು ಅವರು ಮಾಹಿತಿ ನೀಡಿದ್ದಾರೆ.
ಇಂದು ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, 6 ಜನ ವಿದ್ಯಾರ್ಥಿಗಳು ಸ್ನಾನಕ್ಕೆಂದು ಕಾಲುವೆಗೆ ಇಳಿದಿದ್ದರು. ಇದರಲ್ಲಿ ಮೂವರು ನಾಪತ್ತೆಯಾಗಿದ್ದಾರೆ. ನೀರು ಪಾಲಾದ ವಿದ್ಯಾರ್ಥಿಗಳನ್ನು ಹೊಸಪೇಟೆ ನಗರದ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಅಂಜಿನಿ(18) ಹಾಗೂ ಪಿಯುಸಿ ವಿದ್ಯಾರ್ಥಿಗಳಾದ ಗುಂಡಾ ಗ್ರಾಮದ ಗುರುರಾಜ್(17), ಕೊಪ್ಪಳದ ವಸಂತ್(17) ಎಂದು ಗುರುತಿಸಲಾಗಿದೆ.