ಬಳ್ಳಾರಿ :ಜಿಲ್ಲೆಯ ಸಿರುಗುಪ್ಪ ತಾಲೂಕಿನ ದರೂರು ಗ್ರಾಮದ ಲಂಕೇರು ಶಿವಕುಮಾರ್ ಎಲ್ ದ್ವಿತೀಯ ಪಿಯುಸಿ ಶಿಕ್ಷಣ ವಿಭಾಗದಲ್ಲಿ ಶೇ 95.33ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
ದರೂರು: ಶೇ. 95.33ರಷ್ಟು ಅಂಕ ಗಳಿಸಿ ಉತ್ತೀರ್ಣನಾದ ವಿದ್ಯಾರ್ಥಿ ಶಿವಕುಮಾರ್ - Siruguppa PUC exam results
ದರೂರು ಗ್ರಾಮದ ಲಂಕೇರು ಶಿವಕುಮಾರ.ಎಲ್ ದ್ವಿತೀಯ ಪಿಯುಸಿ ಶಿಕ್ಷಣ ವಿಭಾಗದಲ್ಲಿ ಶೇ 95.33ರಷ್ಟು ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ.
![ದರೂರು: ಶೇ. 95.33ರಷ್ಟು ಅಂಕ ಗಳಿಸಿ ಉತ್ತೀರ್ಣನಾದ ವಿದ್ಯಾರ್ಥಿ ಶಿವಕುಮಾರ್ Shivkumar got good marks in PUC exam](https://etvbharatimages.akamaized.net/etvbharat/prod-images/768-512-05:51:04:1594729264-kn-03-bly-140720-puc-village-boy-topar-ka10007-14072020174942-1407f-1594729182-135.jpg)
Shivkumar got good marks in PUC exam
ಕೊಟ್ಟೂರಿನ ಇಂದೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಶಿವಕುಮಾರ್(ಬಡ ವಿದ್ಯಾರ್ಥಿ) 600ಕ್ಕೆ 572 ಅಂಕ ತೆಗೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ 97, ಸಂಸ್ಕೃತ 98, ಐಚ್ಛಿಕ ಕನ್ನಡ 99, ಇತಿಹಾಸ 97, ರಾಜ್ಯಶಾಸ್ತ್ರ 82, ಶಿಕ್ಷಣಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾನೆ.
ವಿದ್ಯಾರ್ಥಿ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.