ಕರ್ನಾಟಕ

karnataka

ETV Bharat / state

ಗುಣಮಟ್ಟದ ಕಾರ್ಯಕ್ರಮ ಪ್ರಸಾರಕ್ಕೆ ಕೇಬಲ್‍ಗಳಿಗೆ ಡಿಸಿ ಕಟ್ಟಪ್ಪಣೆ

ಕೇಬಲ್‍ಗಳು ಕಡ್ಡಾಯವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ನಿಯಮಾನುಸಾರ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಸೂಚನೆ ನೀಡಿದರು.

Strict instruction for cables for broadcasting quality programs
ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆ

By

Published : Dec 4, 2019, 11:06 AM IST

ಬಳ್ಳಾರಿ:ಕೇಬಲ್‍ಗಳು ಕಡ್ಡಾಯವಾಗಿ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬೇಕು. ನಿಯಮಾನುಸಾರ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಂಜುನಾಥ ಸೂಚನೆ ನೀಡಿದರು.

ನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಹಕರಿಂದ ಕೇಬಲ್ ಗುಣಮಟ್ಟದ ಬಗ್ಗೆ ದೂರುಗಳನ್ನು ಸ್ವೀಕರಿಸಿ ಪರಿಶೀಲಿಸಿ ಕ್ರಮವಹಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಬಳ್ಳಾರಿ, ಹೊಸಪೇಟೆ ಮತ್ತು ಹರಪನಳ್ಳಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ದೂರು ಕೋಶಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಕೇಬಲ್ ಟೆಲಿವಿಜನ್ ನೆಟ್‍ವರ್ಕ್ ಅಧಿನಿಯಮ 1995ರ ಅನುಸಾರ ಕೇಬಲ್ ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಯಾವುದೇ ಸಿಗ್ನಲ್‍ಗಳ ದೋಷ, ಕಾರ್ಯಕ್ರಮ ಗುಣಮಟ್ಟದ ಬಗ್ಗೆ ವೀಕ್ಷಕರ ಆಕ್ಷೇಪಗಳು, ಜಾಹೀರಾತುಗಳಲ್ಲಿ ಬಿತ್ತರವಾಗುವ ಸಂದೇಶ, ಚಿತ್ರಗಳ ಆಕ್ಷೇಪ ಹಾಗೂ ಸಾರ್ವಜನಿಕರನ್ನು ಪ್ರಚೋದಿಸುವ, ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಕಾರ್ಯಕ್ರಮಗಳ ಪ್ರಸಾರ, ನಾಗರಿಕ ಸಮಾಜದಲ್ಲಿ ಶಾಂತಿ ಕದಡುವ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಾರ್ಯಕ್ರಮಗಳ ಪ್ರಸಾರ, ಮಹಿಳೆಯರು ಮತ್ತು ಮಕ್ಕಳ ಬಗೆಗಿನ ವಿಕೃತವಾದ ಕಾರ್ಯಕ್ರಮ ಪ್ರಸಾರ, ಅಶ್ಲೀಲ ಚಿತ್ರಗಳನ್ನು ಸ್ಥಳೀಯ ಕೇಬಲ್‍ಗಳಲ್ಲಿ ಪ್ರಸಾರ ಮಾಡಿದರೆ ಸಾರ್ವಜನಿಕರು ಲಿಖಿತವಾಗಿ ಜಿಲ್ಲಾ ದೂರು ಕೋಶಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದರು.

ಇನ್ನು ದೂರು ಸಲ್ಲಿಸುವಾಗ ಪ್ರಸಾರವಾದ ಕಾರ್ಯಕ್ರಮದ ವಿವರ, ದಿನಾಂಕ, ಸಮಯ, ಪ್ರಸಾರ ಮಾಡಿದ ಕೇಬಲ್ ಹೆಸರು, ಸಾಧ್ಯವಾದರೆ ವಿಡಿಯೋ ತುಣುಕುಗಳ ಸಹಿತ ದೂರುಗಳನ್ನು ನೀಡಬಹುದಾಗಿದೆ. ಈ ದೂರುಗಳನ್ನು ಸಹಾಯಕ ಆಯುಕ್ತರು ಬಳ್ಳಾರಿ, ಹೊಸಪೇಟೆ ಹಾಗೂ ಹರಪನಹಳ್ಳಿ ಇವರು ಸ್ವೀಕರಿಸಿ, ಪರಿಶೀಲಿಸಿ ಕ್ರಮ ವಹಿಸಬೇಕು ಹಾಗೂ ದೂರುಗಳು ಉಲ್ಲಂಘನೆ ವಿಷಯದಲ್ಲಿ ಪೊಲೀಸ್ ಇಲಾಖೆಯು ಐ.ಟಿ. ಆ್ಯಕ್ಟ್ ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ABOUT THE AUTHOR

...view details