ಕರ್ನಾಟಕ

karnataka

ETV Bharat / state

ಕರ್ನಾಟಕ - ಆಂಧ್ರ ಗಡಿಯಲ್ಲಿ ತೀವ್ರ ಕಟ್ಟೆಚ್ಚರ: ಎಸ್​ಪಿ ಸಿ.ಕೆ. ಬಾಬಾ - ಹೈವೇ ಪ್ಯಾಟ್ರೋಲಿಂಗ್ ವಾಹನ

ಜಿಲ್ಲೆಯ ಗಡಿಭಾಗದಲ್ಲಿ ಬರುವ ಗ್ರಾಮಗಳಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಕರ್ನಾಟಕ - ಆಂಧ್ರಪ್ರದೇಶ ರಾಜ್ಯದ ಗಡಿಭಾಗದಲ್ಲಿ ಅತೀವ ಕಟ್ಟೆಚ್ಚರ ವಹಿಸಲಾಗಿದೆ ಎಂದು ಎಸ್​ಪಿ ಸಿಕೆ ಬಾಬಾ ತಿಳಿಸಿದ್ದಾರೆ.

sp ck baba
sp ck baba

By

Published : May 8, 2020, 2:54 PM IST

ಬಳ್ಳಾರಿ:ಗಣಿನಾಡು ಬಳ್ಳಾರಿ ಜಿಲ್ಲೆಯ ಕರ್ನಾಟಕ - ಆಂಧ್ರಪ್ರದೇಶ ರಾಜ್ಯದ ಗಡಿಭಾಗದಲ್ಲಿ ಅತೀವ ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಜಿಲ್ಲೆಯ ಗಡಿಭಾಗದಲ್ಲಿ ಬರುವ ಅಂದಾಜು 21 ಗಡಿಭಾಗದ ಗ್ರಾಮಗಳಲ್ಲಿ ಜಿಲ್ಲೆಯ ಒಬ್ಬೊಬ್ಬ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಂತಾರಾಜ್ಯ ಗಡಿಭಾಗದ ಹಳ್ಳಿಗಳಿಂದ ಯಾರೊಬ್ಬರೂ ಕೂಡ ಜಿಲ್ಲೆಯೊಳಗೆ ಪ್ರವೇಶಿಸಿದಂತೆಯೇ ನಿಗಾವಹಿಸಲಾಗಿದ್ದು, ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿಯಿಂದ ಸಂಡೂರು ತಾಲೂಕಿನ ನಾನಾ ಗಡಿಗ್ರಾಮಗಳಲ್ಲೂ ತೀವ್ರ ನಿಗಾ ಇರಿಸಲಾಗಿದೆಂದು ಎಸ್​ಪಿ ಸಿಕೆ ಬಾಬಾ ತಿಳಿಸಿದ್ದಾರೆ.

ಎಸ್​ಪಿ ಸಿ.ಕೆ. ಬಾಬಾ ಸುದ್ದಿಗೋಷ್ಠಿ

ಹೈವೇ ಗಸ್ತು ವಾಹನಗಳ ಸಂಚಾರ

ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ಕಟ್ಟೆಚ್ಚರ ವಹಿಸುವ ಸಲುವಾಗಿಯೇ ಮೂರು ಇನ್ನೋವಾ ಹೈವೇ ಗಸ್ತು ವಾಹನಗಳ ಸಂಚಾರ ವ್ಯವಸ್ಥೆಯನ್ನ ಮಾಡಲಾಗಿದ್ದು, ಗಡಿ ಭಾಗದ ಹಳ್ಳಿಗಳಿಂದ ಯಾರೊಬ್ಬರೂ ಜಿಲ್ಲೆಯೊಳಗೆ ಪ್ರವೇಶಿಸಿದಂತೆ ಹದ್ದಿನ ಕಣ್ಣಿಡಲಾಗಿದೆ.

ಅಂತಾರಾಜ್ಯ ಗಡಿಭಾಗದ ನಾನಾ ಗ್ರಾಮಗಳಿಂದಲೂ ಸಂಚರಿಸುವ ಬೈಕ್ ಮತ್ತು ಲಘು ವಾಹನಗಳ ತಪಾಸಣೆಯನ್ನೂ‌ ನಡೆಸಲಾಗುತ್ತಿದೆ ಎಂದು ಎಸ್​ಪಿ ಸಿಕೆ ಬಾಬಾ ಹೇಳಿದ್ದಾರೆ.

ABOUT THE AUTHOR

...view details