ಬಳ್ಳಾರಿ:ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾದನಹಟ್ಟಿ ಗ್ರಾಮದ ಸುರಕ್ಷಿತ(3) ಮತ್ತು ಶಾಂತಕುಮಾರ್ (7) ಮೃತ ಮಕ್ಕಳಾಗಿದ್ದಾರೆ. ಇನ್ನೊಬ್ಬ ಬಾಲಕಿಗೆ ನಾಯಿ ಕಚ್ಚಿದ್ದು, ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ.
ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ನಾಯಿಯೊಂದು ದಾಳಿ ಮಾಡಿ ಸುರಕ್ಷಿತಾಳ ಮುಖಕ್ಕೆ ನಾಯಿ ಕಚ್ಚಿದೆ. ತಡೆಯಲು ಹೋದ ಶಾಂತಕುಮಾರ್ ಕೈ ಕಾಲಿಗೂ ಸಹ ನಾಯಿ ಕಚ್ಚಿದೆ. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ಹಾಗೂ ಶಾಂತಕುಮಾರ್‌ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಚಿಕಿತ್ಸೆ ಫಲಕಾರಿಯಾಗದೇ ನ.21ರಂದು ಸುರಕ್ಷಿತಾ ಮತ್ತು ನ.22ರಂದು ಶಾಂತಕುಮಾರ್ ಮೃತಪಟ್ಟಿದ್ದಾರೆ.