ಹೊಸಪೇಟೆ :ಹಂಪಿಯ ವಿಜಯ ವಿಠ್ಠಲ ದೇವಸ್ಥಾನದ ಬಳಿ ಎರಡು ಕಂಬಗಳು ಮಳೆಯಿಂದ ಧರೆಗುರುಳಿರುವ ಘಟನೆ ನಡೆದಿದೆ. ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸತತ ಮಳೆಯಾಗುತ್ತಿದ್ದು, ಮಳೆಯಿಂದ ಕಂಬಗಳು ಧರೆಗೆ ಉರುಳಿವೆ ಎನ್ನಲಾಗಿದೆ.
ಮಳೆಯಿಂದ ಧರೆಗುರುಳಿದ ಹಂಪಿ ವಿಜಯ ವಿಠ್ಠಲ ದೇಗುಲದ ಬಳಿಯಿರುವ ಕಂಬಗಳು - Hospete latest news
ಹೊಸಪೇಟೆ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಮಳೆಗೆ ಹಂಪಿಯ ವಿಜಯ ವಿಠ್ಠಲ ದೇವಸ್ಥಾನ ಬಳಿ ಎರಡು ಕಂಬಗಳು ಧರೆಗುರುಳಿವೆ.
ಹಂಪಿ
ಈ ಕುರಿತು ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಹಂಪಿ ವೃತ್ತದ ಉಪಾಧೀಕ್ಷಕ ಕಾಳಿಮುತ್ತು ಅವರು ಮಾತನಾಡಿದ್ದು, ಸತತ ಮಳೆಯಿಂದ ಕಂಬಗಳು ಬಿದ್ದಿರಬಹುದು. ಈ ಕುರಿತು ಪರಿಶೀಸಲಾಗುವುದು ಎಂದರು.
ಕೆಳ ದಿನಗಳ ಹಿಂದೆ ಹಂಪಿಯ ಸಾಲು ಮಂಟಪದ ಕಂಬಗಳು ಹಾಗೂ ಎದುರು ಬಸವಣ್ಣ ಬಳಿ ಸ್ಮಾರಕ ಕಲ್ಲು ಕುಸಿದು ಬಿದ್ದಿತ್ತು.
Last Updated : Sep 28, 2020, 8:35 PM IST