ಕರ್ನಾಟಕ

karnataka

ETV Bharat / state

ಗಣಿ ಜಿಲ್ಲೆಯಲ್ಲಿ 3 ಬಸ್​ಗಳ ಮೇಲೆ ಕಲ್ಲು ತೂರಾಟ.. 2ನೇ ದಿನಕ್ಕೂ ಮುಂದುವರಿದ ಪ್ರತಿಭಟನಾ ಕಾವು - protest by ksrtc workers

ನಿನ್ನೆ ತಡರಾತ್ರಿ ಕೆಎಸ್​ಆರ್​ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು, ತಮ್ಮ ದುಂಡಾವರ್ತನೆ ಮೆರೆದಿದ್ದಾರೆ. ಒಟ್ಟು ಮೂರು ಬಸ್​ಗಳು ಜಖಂಗೊಂಡಿದ್ದು, ಮುಂಬದಿಯ ಗಾಜುಗಳು ಪುಡಿಪುಡಿಯಾಗಿವೆ..

stone pelted
stone pelted

By

Published : Dec 12, 2020, 9:57 AM IST

ಬಳ್ಳಾರಿ :ರಾಜ್ಯವ್ಯಾಪಿ ಕರೆ ನೀಡಿದ್ದ ಸಾರಿಗೆ ನೌಕರರ ಪ್ರತಿಭಟನೆ ಕಾವು 2ನೇ ದಿನಕ್ಕೂ ಮುಂದುವರಿದಿದೆ. ಸಾರಿಗೆ ನೌಕರರ ಪ್ರಮುಖ ಬೇಡಿಕೆ ಈಡೇರಿಸುವವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಬಳ್ಳಾರಿಯ ಹೊಸ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.

ಬಸ್​ಗಳಿಗೆ ಕಲ್ಲು ತೂರಾಟ

ಗಣಿ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಕೆಎಸ್​ಆರ್​ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು, ತಮ್ಮ ದುಂಡಾವರ್ತನೆ ಮೆರೆದಿದ್ದಾರೆ. ಒಟ್ಟು ಮೂರು ಬಸ್​ಗಳು ಜಖಂಗೊಂಡಿದ್ದು, ಮುಂಬದಿಯ ಗಾಜುಗಳು ಪುಡಿಪುಡಿಯಾಗಿವೆ.

ABOUT THE AUTHOR

...view details