ವಿಜಯನಗರ: ಜಿಲ್ಲೆಯಾದ್ಯಂತ ಸತತ ನಾಲ್ಕನೇ ದಿನವೂ ಮಳೆ ಮುಂದುವರೆದಿದ್ದು, ಭಾರಿ ಮಳೆಗೆ ವಿಶ್ವವಿಖ್ಯಾತ ಹಂಪಿ ದೇವಸ್ಥಾನದ ಒಳಭಾಗದ ಮಂಟಪವೊಂದು ಕುಸಿದು ಬಿದ್ದಿರುವ ಘಟನೆ ನಡೆದಿದೆ.
ಹಂಪಿಯಿಂದ ಕಮಲಾಪುರ ರಸ್ತೆಗೆ ತೆರಳುವ ಮಾರ್ಗ ಮಧ್ಯದಲ್ಲಿವು ನೆಲಸ್ತರದ ಶಿವ ದೇವಾಲಯದಲ್ಲಿ ಘಟನೆ ನಡೆದಿದೆ. ಪ್ರಸನ್ನ ವಿರೂಪಾಕ್ಷ ದೇಗುಲದ ಕಲ್ಲಿನ ಕಂಬಗಳಿಗೂ ಹಾನಿಯಾಗಿದೆ. ಮೂರು ಕಲ್ಲಿನ ಕಂಬಗಳು ನೆಲಕ್ಕುರುಳಿದ್ದು, ಇವುಗಳ ಜೊತೆಗೆ ಮಣ್ಣಿನ ತಡೆಗೋಡೆಯೂ ಕುಸಿದಿದೆ. ಶಿವ ದೇವಾಲಯ ಸಂಪೂರ್ಣ ಜಲಾವೃತವಾಗಿದೆ. ಹೀಗಾಗಿ, ದೇವಾಲಯ ನೋಡಲು ಬರುವ ಪ್ರವಾಸಿಗರು ನಿರಾಸೆಯಿಂದ ಹಿಂತಿರುಗುವಂತಾಯಿತು.