ಹೊಸಪೇಟೆ :ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಬಾಸ್ಕೆಟ್ ಬಾಲ್ ಕ್ರೀಡೆ ತುಂಬ ವಿರಳವಾಗಿ ಕಂಡು ಬರುತ್ತದೆ. ಕಲ್ಯಾಣ ಕರ್ನಾಟಕ ಯುವ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ತೊಡಗಬೇಕು ಜತೆಗೆ ನಮ್ಮ ಭಾಗದಲ್ಲಿ ಅತಿ ಹೆಚ್ಚಾಗಿ ಬೆಳೆಸಬೇಕು ಎಂಬುವುದನ್ನು ಅರಿತು ಹರೀಶ್ ಯುವಕ ತಂಡ ಬಾಸ್ಕೆಟ್ ಬಾಲ್ ರಾಜ್ಯ ಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿದೆ.
ಹೊಸಪೇಟೆಯಲ್ಲಿ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಕ್ರೀಡಾಕೂಟ - hospete taluk news
ಸಿ.ಜಿ ಹರಿಕುಮಾರ ಒಬ್ಬ ಉತ್ತಮ ಬಾಸ್ಕೆಟ್ ಬಾಲ್ ಕ್ರೀಡಾ ಪಟುವಾಗಿದ್ದರು. ಅವರು ಅನಾರೋಗ್ಯದದಿಂದ ಮೃತ್ತ ಪಟ್ಟರು. ಸದ್ಯ ಅವರ ಸವಿ ನೆನಪಿಗಾಗಿ ಮೂರು ದಿನಗಳ ಕಾಲ ಈ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ರಾಜ್ಯ ಮಟ್ಟದ ಕ್ರಿಡಾಕೂಟವನ್ನು ಎರ್ಪಡಿಸಲಾಗಿದೆ.
ಹೊಸಪೇಟೆಯಲ್ಲಿ ರಾಜ್ಯಮಟ್ಟದ ಬಾಸ್ಕೆಟ್‌ಬಾಲ್ ಕ್ರೀಡಾಕೂಟ
ನಗರದ ತಾಲೂಕ ಕ್ರೀಡಾಂಗಣದಲ್ಲಿ ಸಿ.ಜಿ. ಹರಿಶ್ಕುಮಾರ್ ಅವರ ಸವಿ ನೆನಪಿಗಾಗಿ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗಿದೆ. ಹರಿಕುಮಾರ್ ಒಬ್ಬ ಉತ್ತಮ ಬಾಸ್ಕೆಟ್‌ಬಾಲ್ ಕ್ರೀಡಾ ಪಟುವಾಗಿದ್ದರು. ಅವರು ಅನಾರೋಗ್ಯದದಿಂದ ಮೃತ್ತ ಪಟ್ಟಿದ್ದು, ಅವರ ಸವಿ ನೆನಪಿಗಾಗಿ ಮೂರು ದಿನಗಳ ಕಾಲ ಈ ಕ್ರಿಡಾಕೂಟ ನಡೆಸುತ್ತಿದ್ದೇವೆ ಎಂದು ಆಯೋಜಕರು ತಿಳಿಸಿದ್ದಾರೆ.
ಯಾವುದೇ ರಾಜಕಾರಣಿಗಳು ಮತ್ತು ವ್ಯಕ್ತಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸಹಾಯಧನ ಪಡೆದುಕೊಂಡಿಲ್ಲ, ಸ್ವತಃ ನಾವೆಲ್ಲ ಸ್ನೇಹಿತರು ಸೇರಿ ಕ್ರಿಡಾಕೂಡ ಏರ್ಪಡಿಸಿರುವುದಾಗಿ ಅವರು ತಿಳಿಸಿದರು.