ವಿಜಯನಗರ :ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಜಯದ ಸಂಕಲ್ಪ ಮಾಡಿ ವಿಜಯನಗರದಿಂದ ರಾಜ್ಯ ಕಾರ್ಯಕಾರಿಣಿ ಮಾಡಲಾಗುತ್ತಿದೆ. ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ಚುನಾವಣೆ ನಡೆದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದನ್ನು ಕಂಡ ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ವಿಕಾಸದ ಆಧಾರದ ಮೇಲೆ ಜನ ಮುಂದೆಯೂ ಬಿಜೆಪಿಯನ್ನು ಗೆಲ್ಲಿಸುತ್ತಾರೆ ಎಂದರು.
ಕಾಂಗ್ರೆಸ್ನಲ್ಲಿ ಸಿಎಂ ಯಾರಾಗಬೇಕು ಎನ್ನುವ ಮಾತುಗಳು ಈಗಾಗಲೇ ಆರಂಭವಾಗಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ್ ಅವರು ಸಿದ್ದರಾಮಯ್ಯರನ್ನು ತುಳಿಯೋಕೆ ನೋಡುತ್ತಿದ್ದಾರೆ. ದೇಶದ ಜನರಿಗೆ ಕಾಂಗ್ರೆಸ್ ಮೇಲೆ ಭರವಸೆ ಹೋಗಿದೆ. ಕಾಂಗ್ರೆಸ್ ಎಂದರೆ ಕನ್ಫ್ಯೂಸ್ ಹಾಗೂ ಕುತಂತ್ರಿ ಪಾರ್ಟಿ. ಮುಂದೆ ಜನರೇ ಕಾಂಗ್ರೆಸ್ ಪಕ್ಷವನ್ನು ಧರೆಗೆ ಕಳಿಸುತ್ತಾರೆ ಎಂದರು.