ಕರ್ನಾಟಕ

karnataka

ಹೊಸಪೇಟೆಯಲ್ಲಿ SSLC ಪರೀಕ್ಷಾ ಕೇಂದ್ರ ಸಿಗದೆ ಪರದಾಡಿದ ವಿದ್ಯಾರ್ಥಿನಿ

By

Published : Jul 19, 2021, 12:09 PM IST

SSLC ಪರೀಕ್ಷಾ ಕೇಂದ್ರದ ಸರಿಯಾದ ವಿಳಾಸ ಸಿಗದೆ ಹೊಸಪೇಟೆಯಲ್ಲಿ ವಿದ್ಯಾರ್ಥಿನಿ ಪರದಾಡುವಂತಾಯಿತು.

student roaming for examination center
ಶಿಕ್ಷಕರು ಪರೀಕ್ಷಾ ಕೇಂದ್ರದ ಬಗ್ಗೆ ವಿದ್ಯಾಥಿರ್ಥಿನಿಗೆ ಮಾಹಿತಿ ನೀಡಿದರು

ಹೊಸಪೇಟೆ (ವಿಜಯನಗರ) :ಪರೀಕ್ಷೆ ಆರಂಭವಾದರೂ ಪರೀಕ್ಷಾ ಕೇಂದ್ರದ ಕೊಠಡಿ ಹುಡುಕಲು SSLC ವಿದ್ಯಾರ್ಥಿನಿವೋರ್ವಳು ತನ್ನ ತಂದೆಯೊಂದಿಗೆ ಪರದಾಡುತ್ತಿದ್ದ ದೃಶ್ಯ ನಗರದಲ್ಲಿ ಕಂಡು ಬಂತು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಬಂದ ವಿದ್ಯಾರ್ಥಿನಿ ಮತ್ತು ಆಕೆಯ ತಂದೆ ಪರೀಕ್ಷಾ ಕೇಂದ್ರ ಹುಡುಕಲು ಪರದಾಡುತ್ತಿದ್ದರು. ಎರಡ್ಮೂರು ಪರೀಕ್ಷಾ ಕೇಂದ್ರಗಳಿಗೆ ಸುತ್ತಾಡಿ ಬಂದಿದ್ದೇವೆ. ಆದರೆ, ನನ್ನ ಪರೀಕ್ಷಾ ಕೇಂದ್ರ ಸಿಗುತ್ತಿಲ್ಲ ಎಂದು ವಿದ್ಯಾರ್ಥಿನಿ ಅಳಲು ತೋಡಿಕೊಂಡಳು.

ಶಿಕ್ಷಕರು ಪರೀಕ್ಷಾ ಕೇಂದ್ರದ ಬಗ್ಗೆ ವಿದ್ಯಾರ್ಥಿನಿಗೆ ಮಾಹಿತಿ ನೀಡಿದರು

ಓದಿ : ಉಳ್ಳಾಲದ SSLC ಪರೀಕ್ಷಾ ಕೊಠಡಿಯಲ್ಲಿ ಬೆಂಕಿ ಅವಘಡ

ಈ ವೇಳೆ ವಿದ್ಯಾರ್ಥಿನಿಯ ಸಹಾಯಕ್ಕೆ ಬಂದ ಅಲ್ಲೇ ಇದ್ದ ಶಿಕ್ಷಕರು, ಎಂ.ಪಿ ಪ್ರಕಾಶ್ ನಗರದಲ್ಲಿ ನಿಮ್ಮ ಪರೀಕ್ಷಾ ಕೇಂದ್ರ ಇದೆ, ಅಲ್ಲಿಗೆ ಹೋಗಿ ಎಂದು ಸರಿಯಾಗಿ ವಿಳಾಸ ತಿಳಿಸಿ, ಅಲ್ಲಿಗೆ ಕಳಿಸಿಕೊಟ್ಟರು.

ABOUT THE AUTHOR

...view details