ಬಳ್ಳಾರಿ: ನಗರದ ಜಿಲ್ಲಾ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಬಳ್ಳಾರಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು, ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಚಾಲನೆ ನೀಡಿದರು.
ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ - ಜಿಲ್ಲಾ ಪೊಲೀಸ್ ಕವಾಯತು ಡಿ.ಎ.ಆರ್ ಮೈದಾನದ
ಇಂದಿನಿಂದ ಮೂರು ದಿನಗಳ ಕಾಲ ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟ ನಡೆಯಲಿದ್ದು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.
![ಬಳ್ಳಾರಿಯಲ್ಲಿ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ annual sporting event](https://etvbharatimages.akamaized.net/etvbharat/prod-images/768-512-5361974-thumbnail-3x2-vicky.jpg)
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ, ಪೊಲೀಸ್ ಇಲಾಖೆಯಲ್ಲಿ ಪ್ರೋಟೋಕಾಲ್, ಬಂದೋಬಸ್ತ್, ಕ್ರೈಮ್ ಇವುಗಳಿಗೆಲ್ಲಾ ಸಮಯ ಇರುತ್ತೆ. ಆದರೆ ತಮ್ಮ ಕೌಟುಂಬಿಕ ಜೀವನಕ್ಕೆ ಸಮಯ ಇರುವುದಿಲ್ಲ. ಆದರೆ ಸಮಾಜದಲ್ಲಿನ ನಾಗರಿಕ ರು ಸುಖನಿದ್ರೆ ಮಾಡಲಿ ಎನ್ನುವ ತ್ಯಾಗ ಮತ್ತು ರಕ್ಷಣೆಯ ಪೊಲೀಸರ ಮನೋಭಾವಕ್ಕೆ ಧನ್ಯವಾದ ಹೇಳಿದರು.
ಪೊಲೀಸರು ಯಾವಾಗಲೂ ಒತ್ತಡದ ಮಧ್ಯೆಯೇ ಜೀವಿಸಬೇಕಾಗುತ್ತದೆ. ಇದರಿಂದ ಹೊರಬರಬೇಕಾದರೆ ಉತ್ತಮ ಹವ್ಯಾಸವನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಅತಿಯಾದ ಒತ್ತಡದಿಂದ ಮಾನಸಿಕ ಖಿನ್ನತೆಗೂ ಒಳಗಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಆರೋಗ್ಯಕರ ಹವ್ಯಾಸಗಳು ತಂಬಾ ಅವಶ್ಯಕ ಎಂದು ಪೊಲೀಸರಿಗೆ ಸಲಹೆ ನೀಡಿದರು.