ಕರ್ನಾಟಕ

karnataka

ETV Bharat / state

ಮುಖ್ಯಮಂತ್ರಿಗೆ ಹಿಟ್ಲರ್ ಎನ್ನುವುದು ಶೋಭೆ ತರಲ್ಲ.. ಶಾಸಕ ಗಣೇಶ್​​ಗೆ ರಾಮುಲು ತಿರುಗೇಟು - ಶಾಸಕ ಗಣೇಶ್​​, ಶ್ರೀರಾಮುಲು

ಕಂಪ್ಲಿ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾವುದೇ ಲಾಬಿ ಇಲ್ಲ. ಈ ಭಾಗದ ರೈತರ ಹಿತದೃಷ್ಟಿಯಿಂದ ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಾರಂಭಿಸಲಾಗುವುದು..

MLA Ganesh, Sriramulu
ಶಾಸಕ ಗಣೇಶ್​​, ಶ್ರೀರಾಮುಲು

By

Published : Dec 1, 2020, 1:26 PM IST

ಹೊಸಪೇಟೆ (ಬಳ್ಳಾರಿ) :ರಾಜ್ಯದ ಮುಖ್ಯಮಂತ್ರಿಗಳಿಗೆ ಹಿಟ್ಲರ್ ಎಂದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರೋದು ಹಿಟ್ಲರ್ ಆಡಳಿತ, ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ಇಲ್ಲ ಎಂದಿದ್ದ ಕಂಪ್ಲಿ ಶಾಸಕ ಜೆ ಎನ್‌ ಗಣೇಶ್​​​ಗೆ ತಿರುಗೇಟು ನೀಡಿದ್ದಾರೆ.

ಹೊಸಪೇಟೆಯಲ್ಲಿ ಶ್ರೀರಾಮುಲು ಪ್ರತಿಕ್ರಿಯೆ

ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರಬೇಕೆಂಬ ಹೋರಾಟ, ಒತ್ತಾಯ ಸರಿ. ಅದಕ್ಕೆ, ಆಕ್ಷೇಪಗಳು ಇದ್ದರೇ ಸರ್ಕಾರಕ್ಕೆ ಸಲ್ಲಿಸಲಿ ಎಂದರು. ಆಡಳಿತ ದೃಷ್ಟಿಕೋನದಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕಂಪ್ಲಿ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ಯಾವುದೇ ಲಾಬಿ ಇಲ್ಲ. ಈ ಭಾಗದ ರೈತರ ಹಿತದೃಷ್ಟಿಯಿಂದ ಕಂಪ್ಲಿ ಸಕ್ಕರೆ ಕಾರ್ಖಾನೆ ಪುನಾರಂಭಿಸಲಾಗುವುದು ಎಂದರು.

ಇದನ್ನೂ ಓದಿ:ರಾಜ್ಯದಲ್ಲಿರೋದು ಹಿಟ್ಲರ್ ಆಡಳಿತ.. ಕಾಂಗ್ರೆಸ್‌ ಶಾಸಕರಿಗಿಲ್ಲ ರಕ್ಷಣೆ - ಕಂಪ್ಲಿ ಎಂಎಲ್‌ಎ ಜೆ ಎನ್‌ ಗಣೇಶ್

ABOUT THE AUTHOR

...view details