ಬಳ್ಳಾರಿ: ನನ್ನನ್ನು ಉಪಮುಖ್ಯಮಂತ್ರಿ ಮಾಡೋ ವಿಚಾರ ಪಕ್ಷಕ್ಕೆ ಬಿಟ್ಟಿರೋದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಬಳ್ಳಾರಿಯ ಸಿರುಗುಪ್ಪ ರಸ್ತೆಯಲ್ಲಿರುವ ಹವಂಬಾವಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
ಮಾಜಿ ಸಚಿವ ಬಿ.ಶ್ರೀರಾಮುಲು ಸುದ್ದಿಗೋಷ್ಟಿ 'ಬೊಮ್ಮಾಯಿ ನನ್ನ ಆತ್ಮೀಯ ಸ್ನೇಹಿತರು'
ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿಪರ ಇರೋ ಸರ್ಕಾರ ರಚನೆಯಾಗಿದೆ. 2023ರಲ್ಲಿ ಮತ್ತೊಮ್ಮೆ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರುತ್ತದೆ ಎಂಬ ವಿಶ್ವಾಸ ನನಗಿದೆ. ನೂತನ ಸಿಎಂ ಬಸವರಾಜ ಬೊಮ್ಮಾಯಿಯವರ ಹೆಸರು ಅನುಮೋದನೆ ಮಾಡೋ ಅವಕಾಶ ನನಗೆ ಸಿಕ್ಕಿತ್ತು. ಬೊಮ್ಮಾಯಿಯವರು ನನ್ನ ಆತ್ಮೀಯ ಸ್ನೇಹಿತರು ಎಂದರು.
ಮನೆಯಲ್ಲಿ ಪೂರ್ವ ನಿಯೋಜಿತ ಪೂಜಾ ಕಾರ್ಯಕ್ರಮ ಆಯೋಜನೆ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬಂದಿದ್ದೆ. ಸಿಎಂ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ಬೇರೆ ಯಾವುದೇ ಕಾರಣವಿಲ್ಲ. ಯಾವ ಮುನಿಸು ಇಲ್ಲ ಎಂದು ಶ್ರೀರಾಮುಲು ಸ್ಪಷ್ಟಪಡಿಸಿದರು.
ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೊಡುತ್ತದೆ. ನಾನು ಜನರಿಂದ ಮೇಲೆ ಬಂದಿದ್ದೇನೆ. ಯಾವುದೇ ಅಸಮಾಧಾನ ಇಲ್ಲ. ಡಿಸಿಎಂ ಹುದ್ದೆ ವಿಚಾರದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ ಎಂದು ಹೇಳಿದರು.
ಇದನ್ನೂ ಓದಿ:ಬೊಮ್ಮಾಯಿ ಸಂಪುಟದಲ್ಲಿ ನಾನು ಸಚಿವನಾಗಿರಲು ಇಷ್ಟಪಡುವುದಿಲ್ಲ: ಹೀಗಂದಿದ್ದೇಕೆ ಶೆಟ್ಟರ್!?
'ಹಿಂದುಳಿದ ವ್ಯಕ್ತಿಗೆ ಸೂಕ್ತ ಸ್ಥಾನಮಾನ ಕೊಡೋ ವಿಶ್ವಾಸವಿದೆ'
ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡ್ತದೆ. ಪಕ್ಷ ನನಗೆ ಎಲ್ಲ ಸ್ಥಾನಮಾನ ಕೊಟ್ಟಿದೆ. ಮೂರು ಬಾರಿ ಮಂತ್ರಿಯಾಗಿದ್ದೇನೆ. ಪಕ್ಷ ನನಗೆ ಈ ಬಾರಿ ಒಳ್ಳೆಯದು ಮಾಡ್ತದೆ. ಹಿಂದುಳಿದ ವ್ಯಕ್ತಿಗೆ ಸೂಕ್ತ ಸ್ಥಾನಮಾನ ಕೊಡೋ ವಿಶ್ವಾಸವಿದೆ, ವೈಯಕ್ತಿಕ ನಿರ್ಧಾರ ಹೇಳೋದಿಲ್ಲ.
ನನ್ನನ್ನು ಉಪಮುಖ್ಯಮಂತ್ರಿ ಮಾಡೋ ವಿಚಾರ ಪಕ್ಷಕ್ಕೆ ಬಿಟ್ಟಿರೋದು. ಶೆಟ್ಟರ್ ವಿಚಾರ ಬಗ್ಗೆ ಮಾತನಾಡಲು ಸಣ್ಣವನಾಗುತ್ತೀನಿ. ಈ ಹಿಂದೆ ವಿಜಯೇಂದ್ರ ಶ್ಯಾಡೋ ಅಂತಿದ್ರು, ಈಗ ಯಡಿಯೂರಪ್ಪ ಶ್ಯಾಡೋ ಬೊಮ್ಮಾಯಿ ಅಂತಾರೆ ಇದೆಲ್ಲವೂ ಸುಖಾಸುಮ್ಮನೆ ಹೇಳೋ ಮಾತು. ನೂತನ ಸಿಎಂ ಬೊಮ್ಮಾಯಿ ಅವರಿಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸೋ ಶಕ್ತಿ ಇದೆ ಎಂದು ಶ್ರೀರಾಮುಲು ಹೇಳಿದರು.