ಬಳ್ಳಾರಿ: ಡಿಸಿಎಂ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ಕಲ್ಯಾಣ ಕರ್ನಾಟಕ ಧ್ವಜಾರೋಹಣ ನೆರವೇರಿಸುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಶ್ರೀರಾಮುಲು, ಪಕ್ಷದ ಮತ್ತು ನಾಯಕರ ತೀರ್ಮಾನಕ್ಕೆ ನಾನು ಬದ್ಧನಾಗಿರುವೆ. ನಾನು ಯಾದಗಿರಿಯಲ್ಲಿ ಧ್ವಜಾರೋಹಣ ಮಾಡುವಂತೆ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಂಡಿದ್ದಾರೆ. ಡಿಸಿಎಂ ಲಕ್ಷ್ಮಣ ಸವದಿ ಬಳ್ಳಾರಿಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಬಳ್ಳಾರಿ ಮೇಲೆ ನನಗೆ ಪ್ರೀತಿಯಿದೆ. ರಾಮ ಎಲ್ಲಾದ್ರೂ ಹೋಗಬಹುದು, ಲಕ್ಷ್ಮಣ ನಮ್ಮ ಜಿಲ್ಲೆಗೆ ಬರ್ತಿದ್ದಾರೆ ಅಷ್ಟೇ ಎಂದರು.