ಕರ್ನಾಟಕ

karnataka

ETV Bharat / state

ಹೆಚ್​ಎಲ್​ಸಿ ಕಾಲುವೆ ದುರಂತ: ಮೃತರ ಕುಟುಂಬಗಳಿಗೆ ಪರಿಹಾರ ಚೆಕ್​ ವಿತರಣೆ - ತುಂಗಭದ್ರಾ ಕಾಲುವೆ

ಇತ್ತೀಚೆಗೆ ಹೆಚ್​ಎಲ್​ಸಿ ಕಾಲುವೆಗೆ ಆಟೋ ಉರುಳಿ ಬಿದ್ದು 6 ಜನ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಮೃತರ ಕುಟುಂಬಸ್ಥರಿಗೆ ಸಚಿವರು ಪರಿಹಾರ ಚೆಕ್​ ವಿತರಿಸಿದರು.

bly_01_parihari.jp
ಮೃತರ ಕುಟುಂಬಕ್ಕೆ ಪರಿಹಾರ ಚೆಕ್​ ವಿತರಣೆ

By

Published : Sep 30, 2022, 9:17 AM IST

ಬಳ್ಳಾರಿ: ಇತ್ತೀಚೆಗೆ ಬಳ್ಳಾರಿ ತಾಲೂಕು ಕೊಳಗಲ್ ಬಳಿ ಆಟೋವೊಂದು ಕಾಲುವೆಗೆ ಬಿದ್ದು 6 ಜನ ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು.

ಕೆಲ ದಿನಗಳ ಹಿಂದೆ ಬಳ್ಳಾರಿ ತಾಲೂಕಿನ ಕೊಳಗಲ್ ಬಳಿ ತುಂಗಭದ್ರಾ ಕಾಲುವೆಗೆ ಕೂಲಿ ಕಾರ್ಮಿಕರಿದ್ದ ಆಟೋ ಉರುಳಿ ಬಿದ್ದು 6 ಜನರು ಮೃತಪಟ್ಟಿದ್ದರು. ಮೃತ ಕುಟುಂಬದ ಸದಸ್ಯರನ್ನು ಭೇಟಿಯಾದ ಸಚಿವ ಶ್ರೀರಾಮುಲು ಘಟನೆಯಲ್ಲಿ ಮೃತರಾದ ನಿಂಗಮ್ಮ, ದುರುಗಮ್ಮ, ಹುಲಿಗೆಮ್ಮ, ಕುಡಿತಿನಿ ಲಕ್ಷ್ಮೀ, ಕುಮಾರಿ ಪುಷ್ಟವತಿ, ಬಿ.ನಾಗರತ್ನಮ್ಮ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ತಲಾ ಎರಡೂವರೆ ಲಕ್ಷ ರೂಪಾಯಿ ಮೊತ್ತದ ಪರಿಹಾರ ಚೆಕ್ ವಿತರಿಸಿದರು.

ಈ ವೇಳೆ ತಹಶೀಲ್ದಾರ್ ವಿಶ್ವನಾಥ್, ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಗ್ರಾಮದ ಮುಖಂಡರು ಮತ್ತು ಬಿಜೆಪಿ ಮುಖಂಡರಾದ ಓಬಳೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ:HLC ಕಾಲುವೆಗೆ ಉರುಳಿ ಬಿದ್ದ ಆಟೋ: ಮೂವರು ಸಾವು, ಹಲವರು ನಾಪತ್ತೆ, ಐದು ಜನರ ರಕ್ಷಣೆ

ABOUT THE AUTHOR

...view details