ಬಳ್ಳಾರಿ: ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಎಂ ಯಡಿಯೂರಪ್ಪನವರು ಶೀಘ್ರವೇ ಗುಣಮುಖವಾಗಲಿ ಎಂದು ಬಿಎಸ್ವೈ ಅಭಿಮಾನಿ ಸಂಘ ರಾಜ್ಯಾಧ್ಯಕ್ಷ ಶ್ರೀನಿವಾಸ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ಬಿಎಸ್ವೈ ಶೀಘ್ರವೇ ಗುಣಮುಖವಾಗಲಿ: ಅಭಿಮಾನಿಗಳಿಂದ ವಿಶೇಷ ಪೂಜೆ - Special Worship for CM BSY
ಬಿ.ಎಸ್.ಯಡಿಯೂರಪ್ಪ ಬೇಗ ಗುಣಮುಖವಾಗಿ ಬರಲಿ ಎಂದು ಬಿ.ಎಸ್.ವೈ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಪಾಟೀಲ್ ನೇತೃತ್ವದಲ್ಲಿ ಕನಕದುರ್ಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಬಿಎಸ್ವೈ ಗುಣಮುಖವಾಗಲು ವಿಶೇಷ ಪೂಜೆ
ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಲಿ. ದೇಶದಲ್ಲಿ ಕೊರೊನಾದಿಂದ ಉಂಟಾದ ಸಮಸ್ಯೆಗಳು ಪರಿಹಾರವಾಗಲಿ ಎಂದು ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಮಾಸ್ಕ್ಗಳನ್ನು ವಿತರಣೆ ಮಾಡಲಾಯಿತು.