ಕರ್ನಾಟಕ

karnataka

ETV Bharat / state

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ.. ಜೋಡೆತ್ತುಗಳಿಗೆ ವಿಶೇಷ ಪೂಜೆ!

ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಜೋಡಿ ಮಣ್ಣೆತ್ತುಗಳು ಹಾಗೂ ಗೋದಲಿಯನ್ನು ಖರೀದಿಸಿ ಈ ದಿನ ಬೆಳಿಗ್ಗೆಯೇ ವಿಶೇಷ ಹೂವಿನ ಅಲಂಕಾರದ ಮೂಲಕ ಪೂಜೆ ಸಲ್ಲಿಸಲಾಯಿತು.

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ.

By

Published : Jul 2, 2019, 11:56 PM IST

ಬಳ್ಳಾರಿ: ಹೈದರಾಬಾದ್​ ಕರ್ನಾಟಕ ಭಾಗದ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಜೋಡಿ ಮಣ್ಣೆತ್ತುಗಳು ಹಾಗೂ ಗೋದಲಿಯನ್ನು ಖರೀದಿಸಿ ಈ ದಿನ ವಿಶೇಷ ಹೂವಿನ ಅಲಂಕಾರದ ಮೂಲಕ ಪೂಜೆ ಸಲ್ಲಿಸಲಾಯಿತು.

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆಗಳಲ್ಲೂ ಕೂಡ ದೇವರ ಜಗುಲಿಯ ಮೇಲೆ ಈ ಮಣ್ಣಿನಿಂದ ತಯಾರಿಸಿದ ಜೋಡೆತ್ತುಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ‌ಗೋಧಿ ಹುಗ್ಗಿ, ಕಾಯಿಪಲ್ಯೆ, ಅನ್ನ, ಸಾಂಬಾರ್ ಮಡೆಸ್ನಾನದಿಂದ ತಯಾರಿಸಿ, ಮಾದ್ಲಿ ಮಾಡಿ ಜೋಡಿ ಮಣ್ಣೆತ್ತುಗಳಿಗೆ ನೈವೇದ್ಯ ಮಾಡುತ್ತಾರೆ. ಬಳಿಕ ಮನೆಮಂದಿ ಸಹಭೋಜನ ಸವಿಯುತ್ತಾರೆ. ನಾಳೆಯ ದಿನ ಈ ಜೋಡಿ ಮಣ್ಣೆತ್ತುಗಳ ಕರಿಹರಿಬಿಡುವ ಭರಾಟೆ ಜೋರಾಗಿಯೇ ಇರುತ್ತದೆ.

ಗಣಿನಾಡಿನಲ್ಲಿ ಸಂಭ್ರಮದ ಮಣ್ಣೆತ್ತಿನ ಅಮಾವಾಸ್ಯೆ..

ರೈತಾಪಿ ವರ್ಗದ ಅಚ್ಚುಮೆಚ್ಚಿನ ಹಬ್ಬಗಳಲ್ಲೊಂದು:

ಉತ್ತರ ಕರ್ನಾಟಕ ಹಾಗೂ ಹೈ-ಕ ಭಾಗದ ನಾನಾ ಜಿಲ್ಲೆಗಳಲ್ಲಿನ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಜೀವಿಸುವ ರೈತಾಪಿ ವರ್ಗದಲ್ಲಿ ಈ ಮಣ್ಣೆತ್ತಿನ‌ ಅಮಾವಾಸ್ಯೆಯು ಒಂದು.‌ ಈ ಅಮಾವಾಸ್ಯೆ ಆಚರಣೆ ಮಾಡಲು ರೈತಾಪಿ ವರ್ಗದವರ ಮನೆಗಳಲ್ಲಿ ಸಂಭ್ರಮ ಮೂಡುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ರೈತರು ಈ ದಿನ ತಮ್ಮ ಗ್ರಾಮಗಳತ್ತ ತೆರಳಿ, ಭೂಮಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವರು ಆ ಭೂಮಿಯ‌ ಮಣ್ಣಿನಿಂದಲೇ ಜೋಡೆತ್ತುಗಳನ್ನು ತಯಾರಿಸುತ್ತಾರೆ. ನಗರ ಪ್ರದೇಶಗಳಲ್ಲಿ ಜೀವಿಸುವವರು ಕುಂಬಾರರು ತಯಾರಿಸಿದ ಮಣ್ಣೆತ್ತುಗಳನ್ನು ಖರೀದಿಸುವ ವಾಡಿಕೆ ಈ ಭಾಗದಲ್ಲಿದೆ.

ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರು:

ಗಣಿನಾಡಿನಲ್ಲಿ ಮಣ್ಣೆತ್ತುಗಳ ಮಾರಾಟದ ಭರಾಟೆ ಜೋರಾಗಿಯೇ ಸಾಗಿತ್ತು.‌ ಬಳ್ಳಾರಿ ನಗರದ ಕುಂಬಾರ ಓಣಿ, ಬೆಂಗಳೂರು ರಸ್ತೆ, ಗಡಿಗಿ ಚನ್ನಪ್ಪ ವೃತ್ತ, ಸತ್ಯನಾರಾಯಣ ಪೇಟೆಯಲ್ಲಿನ ರಾಘವೇಂದ್ರ ಸ್ವಾಮಿ ದೇಗುಲ, ಕನಕದುರ್ಗಮ್ಮ ದೇಗುಲ, ಕುಮಾರಸ್ವಾಮಿ ದೇಗುಲ ಸೇರಿದಂತೆ ಇತರೆಡೆ ನಿನ್ನೆ ಹಾಗೂ ಈ ದಿನವೂ ಮಣ್ಣೆತ್ತುಗಳ ಮಾರಾಟ ನಡೆಯಿತು.‌

For All Latest Updates

TAGGED:

ABOUT THE AUTHOR

...view details