ಬಳ್ಳಾರಿ: ಕೊರೊನಾ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ ಗೌರವ ಸೂಚಕವಾಗಿ ವಿಶೇಷ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದೆ.
ಕೊರೊನಾ ವಾರಿಯರ್ಸ್ ಗೌರವಿಸಲು ವಿಶಿಷ್ಟ ಗಣೇಶ ಪ್ರತಿಷ್ಠಾಪನೆ - Bellary special Ganesh installation to honor the Corona Warriors News
ನಗರದ ಸಿದ್ದಿವಿನಾಯಕ ಮಿತ್ರ ಮಂಡಳಿಯು ನಗರದ ಸಿಂಧಗಿ ಓಣಿಯ ರೆಡ್ಡಿ ಬೀದಿಯಲ್ಲಿ ಕೊರೊನಾ ವಾರಿಯರ್ ಗಣಪ ಕೂರಿಸಿದ್ದಾರೆ.
![ಕೊರೊನಾ ವಾರಿಯರ್ಸ್ ಗೌರವಿಸಲು ವಿಶಿಷ್ಟ ಗಣೇಶ ಪ್ರತಿಷ್ಠಾಪನೆ ವಿಶಿಷ್ಟ ಗಣೇಶ ಪ್ರತಿಷ್ಠಾಪನೆ](https://etvbharatimages.akamaized.net/etvbharat/prod-images/768-512-8525267-52-8525267-1598174957420.jpg)
ವಿಶಿಷ್ಟ ಗಣೇಶ ಪ್ರತಿಷ್ಠಾಪನೆ
ವಿಶಿಷ್ಟ ಗಣೇಶ ಪ್ರತಿಷ್ಠಾಪನೆ
ನಗರದ ಸಿದ್ದಿವಿನಾಯಕ ಮಿತ್ರ ಮಂಡಳಿಯು ನಗರದ ಸಿಂಧಗಿ ಓಣಿಯ ರೆಡ್ಡಿ ಬೀದಿಯಲ್ಲಿ ಕೊರೊನಾ ವಾರಿಯರ್ ಗಣಪ ಕೂರಿಸಿದ್ದಾರೆ. ಸೋಂಕು ತಡೆಯುವುದು ಹೇಗೆ ಎಂಬುದರ ಕುರಿತು ಇಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಈ ಗಣಪನ ಕೈಯಲ್ಲಿ ಸೆಲ್ಯೂಟ್ ಟು ವಾರಿಯರ್ಸ್ ಎಂಬ ಫಲಕವಿದೆ. ಕೊರೊನಾ ವಾರಿಯರ್ಸ್ ನಮಗಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಸೇರಿ ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.