ಕರ್ನಾಟಕ

karnataka

ETV Bharat / state

ಗಣಿನಗರಿಯಲ್ಲಿ ಕ್ರಿಸ್​ಮಸ್​​​ ಸಂಭ್ರಮ... ಏಸು ಕ್ರಿಸ್ತನ ಆರಾಧಿಸಿದ ಭಕ್ತಗಣ - ballary latest news

ಗಣಿನಗರಿಯಲ್ಲಿಂದು ಕ್ರಿಸ್​​ಮಸ್​​ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಡಿಸೆಂಬರ್ 24ರ ಮಧ್ಯುರಾತ್ರಿ 12 ಗಂಟೆ ಸುಮಾರಿಗೆ ದಿವ್ಯ ಬಲಿಪೂಜೆಯೊಂದಿಗೆ ಏಸು ಪ್ರಭುವನ್ನು ಬರಮಾಡಿಕೊಂಡ ಭಕ್ತಗಣ, ಕ್ರಿಸ್​​ಮಸ್​​ ಹಬ್ಬಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

Special Christmas celebration at Ballary!
ಗಣಿನಗರಿಯಲ್ಲಿ ಕ್ರಿಸ್ಮಸ್​ ಸಂಭ್ರಮ...ದಿವ್ಯ ಬಲಿಪೂಜೆಯೊಂದಿಗೆ ಏಸುಪ್ರಭುವನ್ನು ಬರ ಮಾಡಿಕೊಂಡ ಭಕ್ತಗಣ!

By

Published : Dec 25, 2019, 7:10 PM IST

ಬಳ್ಳಾರಿ:ಗಣಿನಗರಿಯಲ್ಲಿಂದು ಕ್ರಿಸ್​​ಮಸ್​​ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ‌

ಡಿಸೆಂಬರ್ 24ರ ಮಧ್ಯುರಾತ್ರಿ 12 ಗಂಟೆ ಸುಮಾರಿಗೆ ದಿವ್ಯ ಬಲಿಪೂಜೆಯೊಂದಿಗೆ ಏಸು ಪ್ರಭುವನ್ನು ಬರಮಾಡಿಕೊಂಡ ಭಕ್ತಗಣ, ಕ್ರಿಸ್​​ಮಸ್​​​ ಹಬ್ಬಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಬಳಿಕ ಬಳ್ಳಾರಿ ನಗರ ವ್ಯಾಪ್ತಿಯ ಆಯಾ ಚರ್ಚ್​ಗಳಲ್ಲಿ ಮಧ್ಯರಾತ್ರಿಯಿಂದಲೇ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲಾಯಿತು.

ಗಣಿನಗರಿಯಲ್ಲಿ ಕ್ರಿಸ್ಮಸ್​ ಸಂಭ್ರಮ

ಬಳಿಕ, ಮನೆಯಲ್ಲಿನ ಗೃಹಿಣಿಯರು ಏಸು ಪ್ರಭುವಿಗೆ ಇಷ್ಟವಾದ ಸಿಹಿ ಖಾದ್ಯಗಳನ್ನು ತಯಾರಿಸಿ, ವಿಶೇಷ ಪ್ರಾರ್ಥನೆ ಮುಖೇನ ಕ್ರಿಸ್​​ಮಸ್​​ ಹಬ್ಬ ಆಚರಿಸಿದರು. ಇನ್ನು ನಗರದ ಮದರ್ ತೆರೇಸಾ ರಸ್ತೆಯಲ್ಲಿರೋ ಓಣಿಯಲ್ಲಿ ನೆಲೆಸಿರುವ ಕ್ರೈಸ್ತ ಧರ್ಮದ ಹತ್ತಾರು ಮನೆಗಳಲ್ಲಿ ವಿಶೇಷ ಪೂಜೆ, ಏಸು ಪ್ರಭುವಿನ ನಾಮಾವಳಿಯನ್ನು ಓದುವ ಮುಖೇನ ಭಕ್ತಿ‌ ಮೆರೆದರು.

ವಿಶೇಷ ಖಾದ್ಯ ರೋಜ್ ಕುಕ್ಕು, ನಿಪ್ಪಟ್ಟು, ಹತ್ತಿರಸ, ಚಕ್ಕುಲಿ ಹಾಗೂ ಕೇಕ್ ತಯಾರಿಸಿ ಗೋದಲಿ ಹಾಗೂ ಏಸು ಪ್ರಭುವಿನ‌ ಮೂರ್ತಿಗೆ ಸಮರ್ಪಿಸಲಾಗುತ್ತದೆ ಎಂದು ಸ್ಥಳೀಯರಾದ ಆಂಥೋನಿಯಮ್ಮ ಹೇಳಿದ್ರು.

ABOUT THE AUTHOR

...view details