ಹೊಸಪೇಟೆ:ವಿಕಲ ಚೇತನರು ಸಾಧಿಸಿ ತೋರುವ ಛಲವನ್ನು ಹೊಂದಿರುತ್ತಾರೆ. ಅಂಗ ವೈಕಲ್ಯವಿರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅಭಿಪ್ರಾಯಪಟ್ಟರು.
ಅಂಗವೈಫಲ್ಯತೆ ದೇಹಕ್ಕೆ ಮನಸಿಗಲ್ಲ: ಶೇಖ್ ತನ್ವೀರ್ ಅಸೀಫ್ - specially abled day
ವಿಕಲಚೇತನರು ಸಾಧಿಸಿ ತೋರುವ ಛಲವನ್ನು ಹೊಂದಿರುತ್ತಾರೆ. ಅಂಗವೈಕಲ್ಯವಿರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅಭಿಪ್ರಾಯಪಟ್ಟರು.
ಅಂಗವೈಫಲ್ಯತೆ ದೇಹಕ್ಕೆ ಮನಸಿಗಲ್ಲ: ಸಹಾಯಕ ಆಯುಕ್ತ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಪ್
ನಗರದ ರೋಟರಿ ಕ್ಲಬ್ ಹಾಗೂ ನಗರ ಗ್ರಾಮೀಣ ಮಯೂರಿ ಮಹಿಳಾ ವಿಕಲಚೇತನರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನರ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಉಪ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್, ವಿಶೇಷಚೇತನರು ಬಹುಮುಖ ಪ್ರತಿಭೆಗಳಾಗಿರುತ್ತಾರೆ. ಸಾಧಿಸಿ ತೋರಿಸುವ ಛಲವನ್ನು ಹೊಂದಿರುತ್ತಾರೆ. ಅಂಗಾಗಳೆಲ್ಲಾ ಸರಿಯಾಗಿದ್ದು, ಉದಾಸೀನರಂತಾಡುವವರನ್ನ ನಾಚಿಸುವಂತೆ ಬದುಕಿ ತೋರುತ್ತಾರೆ ಎಂದರು.
ವಿಕಲಚೇತನರನ್ನು ಯಾರೂ ಕೀಳಾಗಿ ಕಾಣಬಾರದು. ಅವರು ಸಾಮರ್ಥ್ಯಕ್ಕೆ ಮೀರಿ ಕೆಲಸವನ್ನು ಮಾಡುವ ಶ್ರಮ ಜೀವಿಗಳಾಗಿರುತ್ತಾರೆ. ಅವರ ಸಾಧನೆ ಸಮಾಜಕ್ಕೆ ಸ್ಫೂರ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.