ಹೊಸಪೇಟೆ (ವಿಜಯನಗರ):ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿಯಲ್ಲಿ ಎಂಟು ವಾರಗಳ ಕಾಲ ಉಳಿಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದರು.
ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಅನುಮತಿ: ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಅನುಸರಿಸುತ್ತೇವೆ- ಎಸ್ಪಿ
ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ 8 ವಾರಗಳ ಕಾಲ ಉಳಿಯಲು ಸುಪ್ರೀಂಕೋರ್ಟ್ ನಿನ್ನೆ ಅನುಮತಿ ನೀಡಿದೆ. ಅವರು ಇಲ್ಲಿಗೆ ಬಂದಾಗ ಏನೇನು ಮಾಡಬೇಕು ಎಂದು ನಮಗೆ ಲಿಖಿತ ರೂಪದಲ್ಲಿ ಮಾಹಿತಿ ಬರುತ್ತದೆ. ಮಾಹಿತಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.
ಸೈದುಲು ಅಡಾವತ್
ಬಳ್ಳಾರಿಯಲ್ಲಿ ಉಳಿಯಲು ಅವಕಾಶ ಮಾಡಿಕೊಡಬೇಕೆಂದು ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಅವರಿಗೆ ಷರತ್ತುಬದ್ಧ ಅನುಮತಿ ನೀಡಿದೆ. ಈ ಕುರಿತು ನಾವು ಸುಪ್ರೀಂಕೋರ್ಟ್ ಗೈಡ್ಲೈನ್ಸ್ ಅನುಸರಿಸುತ್ತೇವೆ. ಜನಾರ್ದನ ರೆಡ್ಡಿ ಅವರು ಇಲ್ಲಿಗೆ ಬಂದಾಗ ಏನೇನು ಮಾಡಬೇಕು ಅಂತ ನಮಗೆ ಲಿಖಿತ ರೂಪದಲ್ಲಿ ಮಾಹಿತಿ ಬರಲಿದ್ದು, ಅದನ್ನು ಅನುಸರಿಸುತ್ತೇವೆ ಎಂದರು.
ಸದ್ಯಕ್ಕೆ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಆಗಮನದ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.