ಕರ್ನಾಟಕ

karnataka

ETV Bharat / state

ಬಳ್ಳಾರಿಯಲ್ಲಿ ಅವೈಜ್ಞಾನಿಕ ರಸ್ತೆ ತಿರುವುಗಳು ಬಂದ್: ಎಸ್ಪಿ - ಟ್ರಾಫಿಕ್ ಸಮಸ್ಯೆ

ಟ್ರಾಫಿಕ್ ಸಮಸ್ಯೆ ಉಂಟಾದ ಹಿನ್ನೆಲೆ ಬಳ್ಳಾರಿಯ ಕನಕದುರ್ಗಮ್ಮ ದೇಗುಲದಿಂದ ಕಪ್ಪಗಲ್ಲು ರಸ್ತೆಗೆ ಹೋಗುವ ದಾರಿ, ಡಾ. ರಾಜ್ ಉದ್ಯಾನವನಕ್ಕೆ ಹೋಗುವ ದಾರಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಅವೈಜ್ಞಾನಿಕವಾಗಿ ತೆರೆದಿದ್ದ ತಿರುವುಗಳನ್ನು ಬ್ಯಾರಿಕೇಡ್ ಅಳವಡಿಸುವ ಮೂಲಕ ಬಂದ್ ಮಾಡಲಾಗಿದೆ ಎಂದು ಸೈದುಲು ಅಡಾವತ್ ತಿಳಿಸಿದ್ದಾರೆ.

saidulu adavath
saidulu adavath

By

Published : Oct 26, 2020, 7:25 AM IST

ಬಳ್ಳಾರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ ಅಲ್ಲಲ್ಲಿ ಅವೈಜ್ಞಾನಿಕ ರಸ್ತೆ ತಿರುವುಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.

ನಗರದಲ್ಲಿ ಈ ಕುರಿತು ಮಾತನಾಡಿದ ಅವರು, ಬಳ್ಳಾರಿ ಮಹಾನಗರದಲ್ಲಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುವ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕೆಂದ್ರೆ ಅಂದಾಜು 100-200 ಮೀಟರ್​​ನಷ್ಟು ಯೂ ಟರ್ನ್ ತೆಗೆದುಕೊಳ್ಳಲೇಬೇಕು.
ಬಳ್ಳಾರಿಯ ಕನಕದುರ್ಗಮ್ಮ ದೇಗುಲದಿಂದ ಕಪ್ಪಗಲ್ಲು ರಸ್ತೆಗೆ ಹೋಗುವ ದಾರಿ, ಡಾ. ರಾಜ್ ಉದ್ಯಾನವನಕ್ಕೆ ಹೋಗುವ ದಾರಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಅವೈಜ್ಞಾನಿಕವಾಗಿ ತೆರೆದಿದ್ದ ತಿರುವುಗಳನ್ನು ಬ್ಯಾರಿಕೇಡ್ ಅಳವಡಿಸುವ ಮೂಲಕ ಬಂದ್ ಮಾಡಲಾಗಿದೆ ಎಂದರು.

ಇಷ್ಟು ದಿನ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವುದೇ ದೊಡ್ಡ ತಲೆನೋವಾಗಿತ್ತು. ತಿರುವು ರಸ್ತೆಗಳಿಂದ ಸಾರ್ವಜನಿಕ ಸಂಚಾರಕ್ಕೆ ಕೂಡ ತೊಂದರೆಯಾಗಿತ್ತು. ಹೀಗಾಗಿ ತಿರುವು ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details