ಬಳ್ಳಾರಿ: ನನ್ನ ದೇಶವನ್ನು ಪ್ರೀತಿಸೋರಿಗೆ ನಾನು ಪ್ರಾಣ ಕೊಡುವೆ. ಆದರೆ, ದ್ವೇಷಿಸೋರರನ್ನ ಹತ್ತಿರವೂ ಸೇರಿಸಿಕೊಳ್ಳಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಸಿಎಎ ವಿರೋಧಿಸುವವರು ದೇಶದ್ರೋಹಿಗಳು.. ಶಾಸಕ ಜಿ. ಸೋಮಶೇಖರರೆಡ್ಡಿ - ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ
ಈ ಹಿಂದೆ ಪ್ರಚೋದನಕಾರಿ ಹೇಳಿಕೆ ಕೊಟ್ಟ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದರು.
ಶಾಸಕ ಸೋಮಶೇಖರರೆಡ್ಡಿ
ಬಳ್ಳಾರಿಯ ಸತ್ಯನಾರಾಯಣ ಪೇಟೆ ಎಂಎಂಟಿಸಿ ಪಾರ್ಕ್‌ನಲ್ಲಿ ಇಂದು ಸಂಕ್ರಾಂತಿ ಹಬ್ಬದ ನಿಮಿತ್ತ ರಂಗೋಲಿ ಸ್ಪರ್ಧೆ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಎ ವಿರುದ್ಧ ಪ್ರತಿಭಟಿಸುವವರು ದೇಶದ್ರೋಹಿಗಳು. ಅದನ್ನ ಬೆಂಬಲಿಸುವವರು ದೇಶಪ್ರೇಮಿಗಳು ಎಂದಿದ್ದಾರೆ.
ಈ ಹಿಂದೆ ಪ್ರಚೋದನಕಾರಿ ಹೇಳಿಕೆ ಕೊಟ್ಟ ಸಂಬಂಧ ಪ್ರತಿಕ್ರಿಯೆ ನೀಡಿದ ಶಾಸಕ ರೆಡ್ಡಿ, ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಾವೆಲ್ಲ ನ್ಯಾಯಾಂಗಕ್ಕೆ ತಲೆ ಬಾಗಲೇಬೇಕು. ಪೊಲೀಸರ ತನಿಖೆಗೆ ಸಹಕರಿಸುತ್ತೇನೆ ಎಂದರು.