ಬಳ್ಳಾರಿ: ಸಚಿವ ಬಿ.ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಆಪೇಕ್ಷೆ ಜಿಲ್ಲೆಯ ಜನರದ್ದಾಗಿತ್ತು. ಆದರೆ, ಅವರಿಗೆ ಡಿಸಿಎಂ ಸ್ಥಾನ ನೀಡದಿರುವುದು ನಿರಾಸೆ ಉಂಟುಮಾಡಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡದಿರುವುದು ನಿರಾಸೆ ತಂದಿದೆ: ಶಾಸಕ ಸೋಮಶೇಖರ ರೆಡ್ಡಿ
ಸಚಿವ ಬಿ.ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಆಪೇಕ್ಷೆಯನ್ನು ಜಿಲ್ಲೆಯ ಜನರು ಹಾಗೂ ವಾಲ್ಮಿಕಿ ಸಮಾಜದವರು ಹೊಂದಿದ್ದರು. ಆದರೆ, ಅವರಿಗೆ ಡಿಸಿಎಂ ಸ್ಥಾನ ನೀಡದಿರುವುದು ನಿರಾಸೆ ಉಂಟುಮಾಡಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ ಬೇಸರ ವ್ಯಕ್ತಪಡಿಸಿದರು.
ಡಿಸಿಎಂ ಸ್ಥಾನ ನೀಡಬೇಕೆಂಬುದು ಕೇವಲ ನಮ್ಮ ಬೇಡಿಕೆಯಲ್ಲ. ನಮ್ಮ ವಾಲ್ಮೀಕಿ ಸಮುದಾಯದ ಆಸೆಯಾಗಿತ್ತು. ಇದರಿಂದ ಕೊಂಚ ಅಸಮಾಧಾನವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನೂ ಅಖಂಡ ಬಳ್ಳಾರಿ ಜಿಲ್ಲಾ ವಿಭಜನೆ ಕುರಿತು ಸಿಎಂ ಬಿಎಸ್ವೈ ತೆಗೆದುಕೊಂಡ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಜಿಲ್ಲೆಯ ವಿಭಜನೆ ಮಾಡುವುದಿಲ್ಲ ಎಂಬುದಾಗಿ ಸಿಎಂ ಸ್ಪಷ್ಟಪಡಿಸಿದ್ದಾರೆ. ಹಿಂದಿನಿಂದಲೂ ವಿಭಜನೆಗೆ ನಮ್ಮ ವಿರೋಧ ಇದೆ. ಹೀಗಾಗಿ, ಜಿಲ್ಲಾ ವಿಭಜನೆ ಬೇಡ ಎಂದಿದ್ದೇವೆ. ನಾನು, ಸಚಿವ ಆನಂದ ಸಿಂಗ್ ಅವರಲ್ಲಿ ಮನವಿ ಮಾಡುವೆ. ಜಿಲ್ಲೆಯ ವಿಭಜನೆ ಮಾಡದೆ ನಾವೆಲ್ಲ ಅಣ್ಣ-ತಮ್ಮಂದಿರಂತೆ ಇರಬೇಕು ಎಂದರು.