ಕರ್ನಾಟಕ

karnataka

ETV Bharat / state

ನಮ್ಮ ದೇಹದಲ್ಲಿ ಹರಿತಿರೋದು ಕರ್ನಾಟಕ ಸರ್ಕಾರದ ರಕ್ತ: ಶಾಸಕ ಸೋಮಶೇಖರ್ ರೆಡ್ಡಿ - 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿ ಸುದ್ದಿ

ನಾವು ಆಂಧ್ರ ರೆಡ್ಡಿಗಳಲ್ಲ, ನಾವು ಕರ್ನಾಟಕ ರೆಡ್ಡಿಗಳು. ನಮ್ಮ ದೇಹದಲ್ಲಿ ಕರ್ನಾಟಕ ಸರ್ಕಾರದ ರಕ್ತ ಹರಿಯುತ್ತಿದೆ ಎಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

somashekar-reddy-
ಸೋಮಶೇಖರ್ ರೆಡ್ಡಿ

By

Published : Feb 2, 2020, 10:10 AM IST

ಬಳ್ಳಾರಿ: ನಾವು ಆಂಧ್ರ ರೆಡ್ಡಿಗಳಲ್ಲ, ಕರ್ನಾಟಕ ರೆಡ್ಡಿಗಳು. ನಮ್ಮ ದೇಹದಲ್ಲಿ ಹರಿತಿರೋದು ಕರ್ನಾಟಕ ಸರ್ಕಾರದ ರಕ್ತ ಎಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ, ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1946 ರಲ್ಲಿ ನಮ್ಮ ತಂದೆ ಮೈಸೂರಿನಲ್ಲಿ ಪೊಲೀಸ್ ತರಬೇತಿ ಪಡೆಯುತ್ತಿದ್ದರು. ನಂತರ ಬಳ್ಳಾರಿಯಲ್ಲಿ ಡ್ಯೂಟಿ ಮಾಡಿದ್ರು, ನಾನೂ ಕೂಡ ಇದೇ ಮಣ್ಣಲ್ಲಿ ಹುಟ್ಟಿ ಬೆಳೆದಿದ್ದು, ನನ್ನ ಮಕ್ಕಳು ಕೂಡ ಇಲ್ಲೇ ಬೆಳೆಯುತ್ತಿದ್ದಾರೆ. ನನ್ನನ್ನು ಕರ್ನಾಟಕ ಮಣ್ಣಿನ ರೆಡ್ಡಿ ಎಂದು ಕರೆಯಬೇಕು ಎಂದು ಮನವಿ ಮಾಡಿದರು.

ನಮ್ಮ ದೇಹದಲ್ಲಿ ಹರಿತಿರೋದು ಕರ್ನಾಟಕ ಸರ್ಕಾರದ ರಕ್ತ: ಸೋಮಶೇಖರ್ ರೆಡ್ಡಿ

ನಮ್ಮ ತಾಯಿ ಬಳ್ಳಾರಿಯಲ್ಲೇ ಹುಟ್ಟಿದ್ದರಿಂದ, ಇಲ್ಲಿಯೇ ಇರಬೇಕೆಂದು ನಿರ್ಧಾರ ಮಾಡಿದ್ದೆವು, ಅಂದು ನನ್ನ ತಂದೆ-ತಾಯಿ ತೆಗದುಕೊಂಡ ನಿರ್ಧಾರದಿಂದ ಇಂದು ಬಳ್ಳಾರಿ ನಗರದ ಶಾಸಕನಾಗಿ ಸೇವೆ ಸಲ್ಲಿಸುತ್ತಿರುವೆ ಎನ್ನುವ ಮೂಲಕ ಗಾಲಿ ಸೋಮಶೇಖರ್​ ರೆಡ್ಡಿ ತಮ್ಮ ಕನ್ನಡ ಪ್ರೇಮವನ್ನು ಮೆರೆದಿದ್ದಾರೆ.

ABOUT THE AUTHOR

...view details