ಬಳ್ಳಾರಿ: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಹುಚ್ಚು ನಾಯಿ ಕಡಿದಿರಬೇಕು. ಅದಕ್ಕೆ ಇಲ್ಲಿಗೆ ಬಂದು ಹುಚ್ಚು ಬಿಡಿಸಿಕೊಂಡು ಹೋಗಿದ್ದಾನೆ ಅಂತಾ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಏಕ ವಚನದಲ್ಲಿ ಶಾಸಕ ಜಮೀರ್ ಅಹ್ಮದ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯ ಹವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅವನಿಗೆ ಹುಚ್ಚು ನಾಯಿ ಕಡಿದಿರಬೇಕು. ಅದಕ್ಕೆ ಇಲ್ಲಿಗೆ ಬಂದು ಹುಚ್ಚು ಬಿಡಿಸಿಕೊಂಡು ಹೋಗಿದ್ದಾನೆ. ಅವನಿಗೆ ಗೊತ್ತಿಲ್ಲ, ಈ ಸಹೋದರರನ್ನ ಎದುರಾಕಿಕೊಂಡರೆ ಏನಾಗುತ್ತೆ ಅಂತಾ.. ಅದನ್ನ ಮುಂದಿನ ದಿನಗಳಲ್ಲಿ ತೋರಿಸಿಕೊಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖಡ್ಗ ತಗೊಂಡ್ ನಾಲಿಗೆ ಸೀಳಿ ಹಾಕ್ಬಿಡ್ತೀನಿ.. ಶಾಸಕ ಜಮೀರ್‌ಗೆ ಸೋಮಶೇಖರ್ ರೆಡ್ಡಿ ಬೆದರಿಕೆ!! ನಮ್ಮ ದೇಶದ ಆಸ್ತಿ-ಪಾಸ್ತಿಗಳು ಎಷ್ಟು ನಾಶವಾಗಿವೆ ಎನ್ನುವುದು ಅವನಿಗೆ ಗೊತ್ತು. ನಾನೇನಾದ್ರೂ ಜಮೀರ್ ಬಗ್ಗೆ ಅಥವಾ ಮುಸ್ಲಿಂ ಧರ್ಮೀಯರ ಬಗ್ಗೆ ಮಾತನಾಡಿದ್ದೇನಾ? ಹಾಗೇನಾದ್ರೂ ಮಾತಾಡಿದ್ರೆ ನೀನು ಇಲ್ಲಿಗೆ ಬಂದು ಪ್ರತಿಭಟನೆ ನಡೆಸುವುದರಲ್ಲಿ ಅರ್ಥ ಇರುತ್ತೆ ಎಂದು ವಾಗ್ದಾಳಿ ನಡೆಸಿದ್ರು.
ಮಾಜಿ ಪ್ರಧಾನಿ ಹೆಚ್ಡಿಡಿ ಹಾಗೂ ಮಾಜಿ ಸಿಎಂ ಹೆಚ್ಡಿಕೆ ಕುಟುಂಬಸ್ಥರು ನಿನ್ನನ್ನ ಮಗನಂತೆ ನೋಡಿಕೊಂಡಿದ್ದರು. ಅವರನ್ನೇ ನೀನು ತ್ಯಜಿಸಿ ಬಂದಿದ್ದೀಯ. ಯಾರು ಬಿಸ್ಕೇಟ್ ಹಾಕ್ತಾರೆ ಅವರತ್ತ ತೆರಳುತ್ತೀಯ ನೀನು.. ಅಂತಹ ವ್ಯಕ್ತಿತ್ವ ಹೊಂದಿರುವ ನೀನು ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತೀಯಾ ಎಂದು ಕಿಡಿಕಾರಿದ್ದಾರೆ.
ಹತ್ತು ದಿನಗಳ ಕಾಲ ಗಡುವು ನೀಡಿರುವ ಜಮೀರ್‌ಗೆ, ಈ ದೇಶ ನಿಮ್ಮಪ್ಪನ ಆಸ್ತಿನಾ? ಕಾಂಗ್ರೆಸ್ ಪಕ್ಷವನ್ನ ಗುತ್ತಿಗೆ ಪಡೆದಿದ್ದೀಯಾ? ಕಾಂಗ್ರೆಸ್ನ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಒಳ್ಳೆಯ ನಾಯಕರು, ಅವರೊಂದಿಗೆ ನಾನು ಮಾತನಾಡುವೆ ಎಂದಿದ್ದಾರೆ. ಖಡ್ಗ ಖಡ್ಗ ಅಂತಾ ಹೇಳ್ತೀಯಾ, ಖಡ್ಗ್ ತಗೊಂಡ್ ನಿನ್ ನಾಲಿಗೆ ಸೀಳಿ ಹಾಕ್ತೀನಿ ಅಂತಾ ಕೊನೆಗೆ ಬೆದರಿಕೆ ಹಾಕಿದ್ದಾರೆ ಜಿ. ಸೋಮಶೇಖರ್ ರೆಡ್ಡಿ.