ವಿಜಯನಗರ: ಜಿಲ್ಲೆಯ ಹಂಪಿಯ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ವಿಜಯನಗರ ಜಿಲ್ಲೆಯ ವಿವಿಧ ದೇವಸ್ಥಾನಗಳಲ್ಲಿ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆಯವರೆಗೆ ಮಾತ್ರ ದೇವಸ್ಥಾನ ತೆರೆದಿರುತ್ತದೆ. ವಿರೂಪಾಕ್ಷೇಶ್ವರ ದೇವರಿಗೆ ನಿತ್ಯ ತ್ರಿಕಾಲ ಪೂಜೆ ನಡೆಯುತ್ತದ್ದು ಇಂದು ಬೆಳಗ್ಗೆ 6:30ಕ್ಕೆ ಬೆಳಗಿನ ಪೂಜೆ, ಬೆಳಗ್ಗೆ 9 ಗಂಟೆಗೆ ಮಧ್ಯಾಹ್ನದ ಪೂಜೆ, ಬೆಳಗ್ಗೆ 10:30ಕ್ಕೆ ಸಂಜೆ ಪೂಜೆ ನಡೆಯಲಿದೆ.
ಗ್ರಹಣ ಹಿನ್ನೆಲೆ ಮಧ್ಯಾಹ್ನದವರೆಗೆ ಮಾತ್ರ ವಿರೂಪಾಕ್ಷನ ದರ್ಶನ - ಈಟಿವಿ ಭಾರತ ಕನ್ನಡ
ವಿಜಯನಗರ ಜಿಲ್ಲೆಯ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎಲ್ಲ ದೇವಾಲಯಗಳಲ್ಲಿ ಇಂದು ಮಧ್ಯಾಹ್ನ 2 ನಂತರ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಇಲಾಖಾ ಅಧಿಕಾರಿ ತಿಳಿಸಿದ್ದಾರೆ.
ಹಂಪಿಯ ಶ್ರೀವಿರೂಪಾಕ್ಷೇಶ್ಚರ ದೇಗುಲ
ಜಿಲ್ಲೆಯ ಮೈಲಾರದ ಮೈಲಾರಲಿಂಗೇಶ್ವರ ದೇವಸ್ಥಾನ, ಹೊಸೂರಿನ ಹೊಸೂರಮ್ಮ, ಬುಕ್ಕಸಾಗರದ ಏಳುಹೆಡೆ ದೇವಸ್ಥಾನ, ಹಂಪಿಯ ಉದ್ದಾನ ವೀರಭದ್ರೇಶ್ವರ, ಯಂತ್ರೋದ್ಧಾರಕ ಆಂಜನೇಯ, ಕೋದಂಡರಾಮ, ಕುರುವತ್ತಿಯ ಮಲ್ಲಿಕಾರ್ಜುನ ಬಸವೇಶ್ವರ ಮತ್ತು ಹೊಸಪೇಟೆಯ ವಡಕರಾಯ ದೇವಸ್ಥಾನ ಸೇರಿದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇಗುಲಗಳನ್ನು ಸೂರ್ಯಗ್ರಹಣದ ವೇಳೆ ಬಂದ್ ಮಾಡಲಾಗುತ್ತದೆ ಎಂದು ಇಲಾಖೆಯ ಅಧಿಕಾರಿ ಪ್ರಕಾಶರಾವ್ ತಿಳಿಸಿದ್ದಾರೆ.
ಇದನ್ನೂ ಓದಿ :ಸೂರ್ಯಗ್ರಹಣ: ಮಂಗಳವಾರದಂದು ಭಕ್ತರಿಗೆ ಹಾಸನಾಂಬೆ ದರ್ಶನ ಭಾಗ್ಯವಿಲ್ಲ