ಕರ್ನಾಟಕ

karnataka

ETV Bharat / state

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಹಂಪಿಯಲ್ಲಿ ಮೃತ್ತಿಕೆ ಸಂಗ್ರಹ - ಈಟಿವಿ ಭಾರತ್ ಕನ್ನಡ

ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣದ ಹಿನ್ನೆಲೆ ಶುಕ್ರವಾರ ಬಿಜೆಪಿ ಸಚಿವರು ಹಂಪಿಯಲ್ಲಿ ಮೃತ್ತಿಕೆ ಸಂಗ್ರಹಿಸಿದರು.

Special Puja to Hampi Virupakseshwar, Bhubaneswari Devi
ಹಂಪಿ ವಿರೂಪಾಕ್ಷೇಶ್ವರ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆ

By

Published : Nov 4, 2022, 4:40 PM IST

Updated : Nov 4, 2022, 5:43 PM IST

ವಿಜಯನಗರ:ಬೆಂಗಳೂರಿನಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣದ ಹಿನ್ನೆಲೆ ಶುಕ್ರವಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್ ಅಶೋಕ ಸೇರಿದಂತೆ ನಾಲ್ವರು ಸಚಿವರು ಹಂಪಿಯಲ್ಲಿ ಮೃತ್ತಿಕೆ ಸ್ರಂಹಿಸಿದರು.

ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಹಂಪಿಯಲ್ಲಿ ಮೃತ್ತಿಕೆ ಸಂಗ್ರಹ

ಸಚಿವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಬಿಜೆಪಿ ಮುಖಂಡರು ಸ್ವಾಗತಿಸಿ ಅಲ್ಲಿಂದ ಹಂಪಿ ವರೆಗೆ ಬೈಕ್ ಜಾಥಾ ನಡೆಸಿದರು. ಈ ಸಂದರ್ಭದಲ್ಲಿ ಹಂಪಿ ವಿರೂಪಾಕ್ಷೇಶ್ವರ, ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ನಾಡಪ್ರಭು ಕೆಂಪೇಗೌಡರು, ಮತ್ತು ಶ್ರೀ ಕೃಷ್ಣದೇವರಾಯನ ಹೆಸರಲ್ಲಿ ಅರ್ಚನೆ ಮಾಡಿಸಿ ಆರತಿ ತಟ್ಟೆಗೆ ಎಲ್ಲರೂ ತಲಾ 500 ರೂ ಹಾಕಿದರು.

ಇದಾದ ಬಳಿಕ ಹಂಪಿ ಪುಷ್ಕರಣಿಗಳಿಂದ ಒಂಬತ್ತು ಹಿತ್ತಾಳೆಯ ಬಿಂದಿಗೆಗಳಲ್ಲಿ ಸಂಗ್ರಹಿಸಿದ ಮಣ್ಣಿಗೆ ಪೂಜೆ ಮಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ, ಯುವಜನ ಕ್ರೀಡಾ ಸಚಿವ ನಾರಾಯಣಗೌಡ, ಸಂಸದ ವೈ.ದೇವೇಂದ್ರಪ್ಪ ಜೊತೆಗೆ ಅಲ್ಲಿನ ಪವಿತ್ರ ಮಣ್ಣು ತೆಗೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ;ಹಂಪಿ ಸ್ಮಾರಕಗಳಿಗೆ ವಿದ್ಯುತ್​ ದೀಪಾಲಂಕಾರ: ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಕಲ್ಲಿನ ರಥ

Last Updated : Nov 4, 2022, 5:43 PM IST

ABOUT THE AUTHOR

...view details