ಕರ್ನಾಟಕ

karnataka

ETV Bharat / state

ಒಂಟಿ ಮಹಿಳೆಯನ್ನು ತನ್ನ ಕಾರಿನಲ್ಲಿ ಊರಿಗೆ ಕಳುಹಿಸಿದ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ.. - ಕೆ.ಎಸ್.ಆರ್.ಟಿ.ಸಿ ಬಸ್

ಬೆಂಗಳೂರಿನಿಂದ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಂದಿಳಿದ ಲಕ್ಷ್ಮಿ ಎಂಬುವ ಮಹಿಳೆಯನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ತಮ್ಮ ಕಾರಿನಲ್ಲಿಯೇ ಆಕೆಯ ಊರಿಗೆ ಕಳುಹಿಸಿದರು.

reddy
reddy

By

Published : May 5, 2020, 10:25 AM IST

ಬಳ್ಳಾರಿ:ದುಡಿಯಲು ಹೋಗಿ ಬೆಂಗಳೂರಿನಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ಇಂದು ತಮ್ಮ ತವರು ಜಿಲ್ಲೆಗೆ 26 ಬಸ್‌ಗಳಲ್ಲಿ ವಾಪಸಾಗಿದ್ದಾರೆ. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಂದಿಳಿದ ಅವರಿಗೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆಹಾರದ ಪ್ಯಾಕೆಟ್ ವಿತರಣೆ

ಬಳ್ಳಾರಿ ನಗರ ಶಾಸಕ‌ ಜಿ ಸೋಮಶೇಖರ್ ರೆಡ್ಡಿ ಆಹಾರದ ಪ್ಯಾಕೇಟ್ ಮತ್ತು ನೀರಿನ ಬಾಟಲ್​ಗಳನ್ನು ಉಚಿತವಾಗಿ ಕಾರ್ಮಿಕರಿಗೆ ವಿತರಿಸಿದರು.

ಆಹಾರದ ಪ್ಯಾಕೇಟ್ ವಿತರಣೆ

ಜತೆಗೆ ಜಿಲ್ಲಾಡಳಿತ ವಲಸೆ ಕಾರ್ಮಿಕರನ್ನೆಲ್ಲ ಆರೋಗ್ಯ ತಪಾಸಣೆಗೊಳಪಡಿಸಿತ್ತು.‌

ಆಹಾರದ ಪ್ಯಾಕೆಟ್ ವಿತರಣೆ

ಬೆಂಗಳೂರಿನಿಂದ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಬಂದಿಳಿದ ಲಕ್ಷ್ಮಿ ಎಂಬುವ ಮಹಿಳೆಯನ್ನು ಶಾಸಕ ಜಿ.ಸೋಮಶೇಖರ್ ರೆಡ್ಡಿ ತಮ್ಮ ಕಾರಿನಲ್ಲಿಯೇ ಆಕೆಯ ಊರಿಗೆ ಕಳುಹಿಸಿದರು.

ಮಹಿಳೆಯನ್ನು ತನ್ನ ಕಾರಿನಲ್ಲಿ ಊರಿಗೆ ಕಳುಹಿಸಿದ ಶಾಸಕ‌..

ಒಬ್ಬಂಟಿ ಮಹಿಳೆ ಶಾಸಕರನ್ನು ನೋಡಿ ಸಹಾಯಕ್ಕಾಗಿ ಕಣ್ಣೀರು ಹಾಕಿದರು. ಇದರಿಂದ ಕರಗಿದ ಶಾಸಕರು ತಮ್ಮ ಕಾರಿನಲ್ಲಿಯೇ ಆಕೆಯನ್ನ ಊರಿಗೆ ಕಳುಹಿಸಿದರಲ್ಲದೇ, ಆಕೆಯ ತಂದೆ ಹನುಮಂತ ಎಂಬುವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.

ABOUT THE AUTHOR

...view details