ಬಳ್ಳಾರಿ: ಜಿಲ್ಲೆಯಲ್ಲಿ ಬ್ರಿಟಿಷರ ಕಾಲದ ಅನೇಕ ಪಾರಂಪರಿಕ ಕಟ್ಟಡಳಿದ್ದು, ಸುಮಾರು 150 ರಿಂದ 200 ವರ್ಷಗಳ ಇತಿಹಾಸವನ್ನು ಹೊಂದಿವೆ. ಇಂತಹ ಬಿರು ಬಿಸಿಲಿಗೆ ಬೇಸತ್ತು ಒಂದೊಮ್ಮೆ ಈ ಕಟ್ಟಡಗಳನ್ನು ಪ್ರವೇಶಿಸಿದರೆ ತಂಪಾದ ಅನುಭವವಾಗುತ್ತದೆ.
ಬ್ರಿಟಿಷರ ಕಾಲದ ಈ ಕಟ್ಟಡಗಳನ್ನು ಸಂಪೂರ್ಣವಾಗಿ ಕಲ್ಲು ಮತ್ತು ಸುಣ್ಣದ ಗಾರೆ ಹಾಗೂ ಬೆಲ್ಲದಿಂದ ನಿರ್ಮಾಣ ಮಾಡಲಾಗಿದ್ದು, ಈ ಕಟ್ಟಡಗಳನ್ನು ಪಿಲ್ಲರ್ಗಳಿಲ್ಲದೆ ಕೇವಲ ಕಮಾನುಗಳ ಮೂಲಕ ನಿರ್ಮಿಸಲಾಗಿದೆ. ಹಾಗಾಗಿ ಇವು ಸದಾ ಬೆಳಕು ಮತ್ತು ಗಾಳಿಯಿಂದ ಕೂಡಿವೆ.
ಇಂತಹ ಪಾರಂಪರಿಕ ಕಟ್ಟಡಗಳಲ್ಲಿ ಜಿಲ್ಲಾಡಳಿತ ಕಚೇರಿ ಕೂಡ ಒಂದು. ಈ ಕಟ್ಟಡಕ್ಕೆ ಅಂದಾಜು 180 ವರ್ಷಗಳ ಇತಿಹಾಸ ಇದೆ. ಅಂಚೆ ಅಧೀಕ್ಷಕರ ಕಚೇರಿ ಕಾರ್ಯ ನಿರ್ವಹಿಸುವ ಕಟ್ಟಡಕ್ಕೆ ಸುಮಾರು 150 ವರ್ಷಗಳ ಇತಿಹಾಸ ಇದ್ದರೆ, ಜಿಲ್ಲಾ ಪಂಚಾಯತ್ ಕಚೇರಿ ಹಾಗೂ ರೈಲ್ವೆ ನಿಲ್ದಾಣಕ್ಕೂ ಅದರಷ್ಟೇ ವರ್ಷಗಳ ಇತಿಹಾಸವಿದೆ. ಇಂಥಹ ಪಾರಂಪರಿಕ ಕಟ್ಟಡಗಳು ಬಿಸಿಲನಾಡು ಬಳ್ಳಾರಿಯಲ್ಲಿರೋದು ಹೆಮ್ಮೆಯ ವಿಷಯವಾಗಿದೆ.