ಹೊಸಪೇಟೆ (ವಿಜಯನಗರ):ಎಂಎಸ್ಪಿಎಲ್ ಪ್ಲಾಂಟ್ನಲ್ಲಿ 85 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣ ರಾಡುಗಳನ್ನು ಕಳ್ಳತನ ಮಾಡಿದ್ದ ಆರು ಜನ ಆರೋಪಿಗಳನ್ನು ಶುಕ್ರವಾರ ಸಂಜೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಪೇಟೆ ತಾಲೂಕಿನ ಹನುಮನಹಳ್ಳಿಯ ಅಂಜಿನಪ್ಪ, ಸಿದ್ದಲಿಂಗ, ಮಂಜುನಾಥ, ದುರುಗಪ್ಪ, ಕವಿರಾಜ ಅಡವಿ ಸ್ವಾಮಿ ಬಂಧಿತರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹನುಮಂತಪ್ಪ ಪೂಜಾರಿ ಅವರು 18 ಕಬ್ಬಿಣ ರಾಡುಗಳು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.