ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ನೀಡಿದ ನಂತರವೇ ನಿವೇಶನಗಳನ್ನು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ತಿಳಿಸಿದ್ದಾರೆ.
ಅಂತಿಮ ಅನುಮೋದನೆ ನಂತರ ನಿವೇಶನಗಳ ನೋಂದಣಿ ಕಡ್ಡಾಯ: ದಮ್ಮೂರು ಶೇಖರ್
ಸ್ಥಳೀಯ ಯೋಜನಾ ಪ್ರದೇಶದಲ್ಲಿ ವಿನ್ಯಾಸಕ್ಕೆ ಅಂತಿಮ ಅನುಮೋದನೆ ನೀಡಿದ ನಂತರವೇ ನಿವೇಶನಗಳನ್ನು ನೋಂದಣಿ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ತಿಳಿಸಿದ್ದಾರೆ.
ಪ್ರಾಧಿಕಾರದಿಂದ ಅನುಮತಿ ಪಡೆಯದೇ ನೋಂದಾಯಿಸಿರುವ ಕುರಿತು ಸಾರ್ವಜನಿಕರಿಂದ ಮೌಖಿಕವಾಗಿ ದೂರುಗಳು ಬಂದಿದ್ದು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ವ್ಯಾಪ್ತಿಯ ಪ್ರದೇಶದಲ್ಲಿ ತಮ್ಮ ನೋಂದಣಿ ಕಾರ್ಯಾಲಯದಿಂದ 2010 ರಿಂದ ಇಲ್ಲಿಯವರೆಗೆ ವಸತಿ, ವಾಣಿಜ್ಯ, ಕೈಗಾರಿಕಾ ವಿನ್ಯಾಸ, ಕಟ್ಟಡಗಳ ನೋಂದಣಿಯಾಗಿರುವ ಬಗ್ಗೆ ಇದುವರೆಗೆ ಬುಡಾಕ್ಕೆ ಮಾಹಿತಿ ನೀಡಿರುವುದಿಲ್ಲ.
ಕೂಡಲೇ ಅಗತ್ಯ ದಾಖಲಾತಿಗಳೊಂದಿಗೆ ತ್ವರಿತವಾಗಿ ನೋಂದಣಿ ಮಾಹಿತಿಯನ್ನು ಬುಡಾಕ್ಕೆ ಸಲ್ಲಿಸುವಂತೆ ಜಿಲ್ಲಾ ಉಪ ನೋಂದಣಾಧಿಕಾರಿಗಳಾದ ಶಿವಾನಂದ ಹಾಗೂ ಉಮೇಶ್ ಎಂ ಅವರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.