ಬಳ್ಳಾರಿ:ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮ ಸಮೀಪದ ಹಗರಿ ನದಿಯಲ್ಲಿ ನಡೆಯುತ್ತಿದ್ದ ಮರಳು ಅಕ್ರಮ ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ 2 ಟ್ರ್ಯಾಕ್ಟರ್ ಸೀಜ್ ಮಾಡಿದ್ದಲ್ಲದೇ ಐವರನ್ನು ಬಂಧಿಸಿದ್ದಾರೆ.
ಅಕ್ರಮ ಮರಳು ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್ ದಾಳಿ.. 2 ಟ್ರ್ಯಾಕ್ಟರ್ ಸೀಜ್, ಐವರ ಅರೆಸ್ಟ್.. - illegal sand transport
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮ ಸಮೀಪದ ಹಗರಿ ನದಿಯಲ್ಲಿ ಅಕ್ರಮ ಮರಳು ಸಾಗಣೆ ಅಡ್ಡ ನಡೆಯುತ್ತಿದ್ದು, ವಿಷಯ ತಿಳಿದ ಕೂಡಲೇ ಮರಳು ಅಕ್ರಮ ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ, ಎರಡು ಟ್ರ್ಯಾಕ್ಟರ್ ವಶಪಡಿಸಿಕೊಂಡು ಐವರನ್ನು ಬಂಧಿಸಿದ್ದಾರೆ.
ಮರಳು ಅಕ್ರಮ ಸಾಗಣೆ ವಿಷಯ ತಿಳಿದ ಬಳಿಕ, ಮಂಗಳವಾರ ತಡರಾತ್ರಿ ತಹಶೀಲ್ದಾರ್ ದಯಾನಂದ ಪಾಟೀಲ ಹಾಗೂ 15 ಮಂದಿಯ ತಂಡ ದಾಳಿ ನಡೆಸಿತು. ಕರ್ಚಿಗನೂರು, ಸಿರುಗುಪ್ಪ ಮೂಲದ ಐವರನ್ನು ಸಿರುಗುಪ್ಪ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಏಕಕಾಲಕ್ಕೆ ದಾಳಿ ನಡೆಸಿ ಮರಳು ಸಾಗಣೆಯಲ್ಲಿ ತೊಡಗಿದ್ದ ಎರಡು ಟ್ರ್ಯಾಕ್ಟರ್, ಕೃತ್ಯದಲ್ಲಿ ಬಳಸಲಾಗಿದ್ದ ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಐವರು ಆರೋಪಿಗಳನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿದ್ದಾರೆ.
ಸದ್ಯ ಸಿರುಗುಪ್ಪ ಠಾಣೆಯ ಪೊಲೀಸರು ಅಸ್ಪಷ್ಠ ನೋಂದಣಿ ಸಂಖ್ಯೆವುಳ್ಳ ಟ್ರ್ಯಾಕ್ಟರ್ಗಳನ್ನು ಜಪ್ತಿಗೊಳಿಸಿದ್ದಾರೆ. ಜೊತೆಗೆ, ಠಾಣಾಧಿಕಾರಿಗೆ ಮುಂದಿನ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.