ಕರ್ನಾಟಕ

karnataka

ETV Bharat / state

ವಸತಿ ಶಾಲೆ ಹೊರ ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಲು ಒತ್ತಾಯ - Bellary district Siruguppa Residential School

ಸಿರುಗುಪ್ಪ ಸರ್ಕಾರಿ ವಸತಿ ಶಾಲೆಯಲ್ಲಿ ಹೊರ ಗುತ್ತಿಗೆ ಆಧಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರ ಬಾಕಿ ವೇತನ ಪಾವತಿಸುವಂತೆ ಎಂ.ಬಾಬು ನೇತೃತ್ವದ ನಿಯೋಗವು ಸಮಾಜ ಕಲ್ಯಾಣಾಧಿಕಾರಿ ಎನ್.ರಾಜಪ್ಪ ಅವರಿಗೆ ಮನವಿ ಸಲ್ಲಿಸಿತು.

Residential School Employees
Residential School Employees

By

Published : Sep 23, 2020, 10:02 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ‌ ಸರ್ಕಾರಿ ವಸತಿ ಶಾಲೆಯ ಹೊರ ಗುತ್ತಿಗೆ ನೌಕರರ ಸೇವೆಯನ್ನು ಕಾಯಂಗೊಳಿಸಬೇಕು ಹಾಗೂ ಬಾಕಿ ವೇತನವನ್ನು ಕೂಡಲೇ ರಾಜ್ಯ ಸರ್ಕಾರ ಪಾವತಿಸಬೇಕೆಂದು ಜಿಲ್ಲಾ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕ ನೌಕರರ ಜಿಲ್ಲಾ ಸಮಿತಿ ಮನವಿ ಮಾಡಿತು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ತೆರಳಿದ ಸಮಿತಿಯ ಮುಖಂಡ ಎಂ.ಬಾಬು ನೇತೃತ್ವದ ನಿಯೋಗವು ಸಮಾಜ ಕಲ್ಯಾಣಾಧಿಕಾರಿ ಎನ್.ರಾಜಪ್ಪ ಅವರಿಗೆ ಈ ಕುರಿತು ಮನವಿ ಸಲ್ಲಿಸಿತು.

ಸಿರುಗುಪ್ಪ ಸರ್ಕಾರಿ ವಸತಿ ಶಾಲೆಯಲ್ಲಿ ಹೊರ ಗುತ್ತಿಗೆ ಆಧಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರು, ಶುಶ್ರೂಷಕರು ಲಾಕ್​​ಡೌನ್ ಅವಧಿಯಾದ ಏಪ್ರಿಲ್, ಮೇ, ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಆ ಎಲ್ಲಾ ತಿಂಗಳ ವೇತನವನ್ನು ಪಾವತಿಸದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕೂಡಲೇ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಸಬೇಕು. ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಮುಂದುವರೆಸಿ ಸೇವಾ ಭದ್ರತೆ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ABOUT THE AUTHOR

...view details